Pic Credit: pinterest
By Preeti Bhat
30 May 2025
ಸಾಮಾನ್ಯವಾಗಿ ನಮ್ಮ ದೇಹ ಅನಾರೋಗ್ಯ ಬರುವ ಸೂಚನೆಗಳನ್ನು ನೀಡುತ್ತದೆ. ಆದರೆ ನಾವು ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ದೇಹ ನೀಡುವ ಸೂಚನೆಗಳಲ್ಲಿ, ಸ್ನಾನ ಮಾಡಿದ ನಂತರ ಕಂಡುಬರುವ ಸುಸ್ತು ಕೂಡ ಒಂದು. ಈ ರೀತಿಯ ಸಮಸ್ಯೆ ಹಲವರಿಗೆ ಇರಬಹುದು.
ಈ ಬಗ್ಗೆ ಡಾ. ಐಶ್ವರ್ಯಾ ಗೌಡ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು, ಅವರು ಹೇಳಿರುವ ಪ್ರಕಾರ ಈ ರೀತಿ ಆಗುವುದು ಸಾಮಾನ್ಯವಲ್ಲ.
ಸ್ನಾನ ಮಾಡಿ ಬಂದ ತಕ್ಷಣ ಅನೇಕ ಜನರಿಗೆ ಆಯಾಸವಾಗುತ್ತದೆ. ಇದಕ್ಕೆ ಕಾರಣ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದಿಲ್ಲ.
ಹಾಗಾದರೆ ಈ ರೀತಿ ಸಮಸ್ಯೆ ಆಗುತ್ತಿದ್ದರೆ ಏನು ಮಾಡಬೇಕು? ಸ್ನಾನಕ್ಕೆ ಹೋಗುವ ಮೊದಲು ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಈ ಅಭ್ಯಾಸ ನಿಮ್ಮ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.
ಸ್ನಾನ ಮಾಡುವಾಗ ತುಂಬಾ ಬಿಸಿ ಅಥವಾ ತುಂಬಾ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಿ.
ಈ ರೀತಿ ಮಾಡುವುದರಿಂದ ಸ್ನಾನ ಆಗಿ ಬಂದ ನಂತರ ಕಾಡುವ ಸುಸ್ತನ್ನು ತಡೆಯಬಹುದು.