ಈ ಹಣ್ಣಿನ ಎಲೆ ಸೇವಿಸಿದ್ರೆ ಶುಗರ್ ಲೆವೆಲ್ ಹೆಚ್ಚಾಗಲ್ಲ

Pic Credit: pinterest

By Preeti Bhat

04 July 2025

ಆರೋಗ್ಯ

ನಮ್ಮ ಸುತ್ತಮುತ್ತಲಿರುವ ಅದೆಷ್ಟೋ ಮರ- ಗಿಡಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮದ್ದಾಗಿರುತ್ತವೆ. ಆದರೆ ಅವುಗಳನ್ನು ನಾವು ಕಡೆಗಣಿಸುತ್ತೇವೆ.

ಅಂಜೂರದ ಎಲೆ

ಈ ಸಾಲಿಗೆ ಅಂಜೂರದ ಎಲೆಯೂ ಸೇರಿಕೊಳ್ಳುತ್ತದೆ. ಇದರಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿಗೆ ಹೆಸರುವಾಸಿ ಎಂಬುದು ಹಲವರಿಗೆ ತಿಳಿದಿಲ್ಲ.

ಗ್ಲೂಕೋಸ್

ಅಂಜೂರದ ಎಲೆಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ.

ಮಧುಮೇಹ

ಮಧುಮೇಹ ಇರುವವರು ನಿಯಮಿತವಾಗಿ ಅಂಜೂರದ ಎಲೆಗಳನ್ನು ಸೇವನೆ ಮಾಡುವುದರಿಂದ ಇನ್ಸುಲಿನ್ ಅಗತ್ಯವು ಕಡಿಮೆಯಾಗುತ್ತದೆ.

ಒತ್ತಡ

ಅಂಜೂರದ ಎಲೆ ಉತ್ಕರ್ಷಣ ನಿರೋಧಕ ಗುಣಗಳನ್ನು ಸಹ ಹೊಂದಿವೆ, ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿದ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ.

ನೈಸರ್ಗಿಕ

ಅಂಜೂರದ ಎಲೆ ನೈಸರ್ಗಿಕ ಮೂತ್ರವರ್ಧಕ ಮತ್ತು ವಿರೇಚಕವಾಗಿ ಕಾರ್ಯನಿರ್ವಹಿಸುತ್ತವೆ, ಮೂತ್ರನಾಳ ಮತ್ತು ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರಲು ಸಹಾಯಕವಾಗುತ್ತವೆ.

ರಸ

ಅಂಜೂರದ ಎಲೆಯ ರಸವು ಅದರ ಪ್ರೋಟಿಯೋಲೈಟಿಕ್ ಕಿಣ್ವಗಳಿಂದಾಗಿ ನರಹುಲಿಗಳನ್ನು ತೆಗೆದುಹಾಕುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.

ನೈಸರ್ಗಿಕ ಪರ್ಯಾಯ

ಹಾಗಾಗಿ ಇದನ್ನು ಸ್ಥಳೀಯವಾಗಿ ಹೆಚ್ಚು ಹೆಚ್ಚು ಬಳಸಲಾಗುತ್ತದೆ. ಒಂದು ರೀತಿ ನೈಸರ್ಗಿಕ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.