ಈ ಹಣ್ಣುಗಳ ಸೇವನೆ ಮಾಡಿ, ಲಿವರ್ ಆರೋಗ್ಯವಾಗಿರುತ್ತೆ

Pic Credit: gettyimages

By Preeti Bhat

01 May 2025

ಲಿವರ್

ಯಕೃತ್ತು ಅಥವಾ ಲಿವರ್ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಆರೋಗ್ಯವಾಗಿದ್ದಾಗ ಮಾತ್ರ ನಮ್ಮ ದೇಹ ಚೆನ್ನಾಗಿರಲು ಸಾಧ್ಯ.

ಫ್ಯಾಟಿ ಲಿವರ್

ಲಿವರ್ ಅನ್ನು ಆರೋಗ್ಯವಾಗಿಟ್ಟುಕೊಳ್ಳಲು, ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಯಲು ಕೆಲವು ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣಿನಲ್ಲಿಯೂ ವಿಟಮಿನ್ ಸಿ ಹೇರಳವಾಗಿದ್ದು ಇದು ಲಿವರ್ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ಸೇಬು ಹಣ್ಣು

ಸೇಬುಗಳಲ್ಲಿರುವ ಫೈಬರ್ ಅಂಶವು ಪಿತ್ತಜನಕಾಂಗದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ.

ಅನಾನಸ್ ಹಣ್ಣು

ಅನಾನಸ್ ಲಿವರ್ ನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅದರ ಕಾರ್ಯವನ್ನು ಸುಧಾರಿಸಲು ಉಪಯುಕ್ತವಾಗಿದೆ.

ಪಪ್ಪಾಯಿ ಹಣ್ಣು

ಪಪ್ಪಾಯಿಯಲ್ಲಿ ಪಪೈನ್ ಎಂಬ ಪ್ರಮುಖ ಕಿಣ್ವವಿದೆ. ಇದು ಪಿತ್ತಜನಕಾಂಗವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

ಮಾವಿನ ಹಣ್ಣು

ಮಾವಿನಹಣ್ಣಿನಲ್ಲಿ ವಿಟಮಿನ್ ಎ, ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇವು ಲಿವರ್ ಅನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿಯಲ್ಲಿ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕ ಯಕೃತ್ತನ್ನು ಹಾನಿಕಾರಕ ಆಹಾರಗಳಿಂದ  ರಕ್ಷಿಸುತ್ತದೆ.

ಕಿವಿ ಹಣ್ಣು

ಕಿವಿ ಹಣ್ಣು ಯಕೃತ್ತಿನ ಆರೋಗ್ಯವನ್ನು ಸುಧಾರಿಸುವುದಲ್ಲದೆ ಫ್ಯಾಟಿ ಲಿವರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.