15 ನಿಮಿಷ ಸ್ಕಿಪ್ಪಿಂಗ್‌ ಮಾಡಿ ಆರೋಗ್ಯದಲ್ಲಿ ಬದಲಾವಣೆ ನೋಡಿ

Pic Credit: pinterest

By Preeti Bhat

17 June 2025

ಆಹಾರ ಪದ್ಧತಿ

ವಾಕಿಂಗ್, ಜಾಗಿಂಗ್, ಜಿಮ್ ಮತ್ತು ಈಜು ಮುಂತಾದ ವ್ಯಾಯಾಮಗಳ ಜೊತೆಗೆ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಕೂಡ ಬಹಳ ಮುಖ್ಯ.

ಸ್ಕಿಪ್ಪಿಂಗ್

ಆದರೆ ತಾಸುಗಟ್ಟಲೆ ವ್ಯಾಯಾಮ ಮಾಡುವುದಕ್ಕಿಂತ ದಿನಕ್ಕೆ ಕೇವಲ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬಹುದು.

ರಕ್ತ ಪರಿಚಲನೆ

ಪ್ರತಿದಿನ 15 ನಿಮಿಷ ಸ್ಕಿಪ್ಪಿಂಗ್ ಅಥವಾ ಜಿಗಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಮೆದುಳು

ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

15 ನಿಮಿಷ

ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ಗಟ್ಟಿಯಾಗುತ್ತವೆ.

ಆರೋಗ್ಯ

ಸ್ಕಿಪ್ಪಿಂಗ್ ಮಾಡುವುದರಿಂದ ಕಾಲು, ತೋಳುಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ, ಇದರಿಂದ ದೇಹವು ಫಿಟ್ ಆಗಿ ಕಾಣುವುದಲ್ಲದೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ತೂಕ

ಸ್ಕಿಪ್ಪಿಂಗ್ ಮಾಡುವುದರಿಂದ ಬಹಳ ವೇಗವಾಗಿ ತೂಕ ಇಳಿಸಿಕೊಳ್ಳಬಹುದು. ದೈಹಿಕ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.

ಒತ್ತಡ

ಸ್ಕಿಪ್ಪಿಂಗ್ ಮಾಡುವುದರಿಂದ ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.