ರಾತ್ರಿ ಮಲಗುವ ಮೊದಲು ಈ ಕೆಲಸ ಮಾಡಬಾರದು ಎನ್ನುತ್ತಾರೆ ಡಾ. ಸೌರಭ್ ಸೇಥಿ

Pic Credit: pinterest

By Preeti Bhat

16 July 2025

ಒಳ್ಳೆಯ ನಿದ್ದೆ

ರಾತ್ರಿಯ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ಮಾತ್ರವಲ್ಲ ಇದು ನಮ್ಮ ನಿದ್ದೆಯನ್ನು ಹಾಳು ಮಾಡಬಹುದು.

ರಾತ್ರಿ ಸಮಯ

ಅದಕ್ಕಾಗಿಯೇ ಹಾರ್ವರ್ಡ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ರಾತ್ರಿ ಸಮಯದಲ್ಲಿ ಮಾಡಬಾರದ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಜೀರ್ಣಕ್ರಿಯೆಯ ಮೇಲೆ ಒತ್ತಡ

ಮಲಗುವ ಮುನ್ನ ಹೊಟ್ಟೆ ತುಂಬುವಂತೆ ಊಟ ಮಾಡುವುದು ಸರಿಯಲ್ಲ. ಈ ರೀತಿ ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ.

ಮೆಲಟೋನಿನ್ ಹಾರ್ಮೋನ್

ಮಲಗುವ ಮುನ್ನ ಗಂಟೆಗಟ್ಟಲೆ ಫೋನ್‌ ನೋಡುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.

ಕೆಫೀನ್ ಸೇವನೆ

ಸಂಜೆ ಅಥವಾ ತಡರಾತ್ರಿಯಲ್ಲಿ ಕೆಫೀನ್ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕಾಫಿ, ಟೀ, ಚಾಕೊಲೇಟ್ ಮತ್ತು ಅನೇಕ ತಂಪು ಪಾನೀಯಗಳಲ್ಲಿಯೂ ಕೆಫೀನ್ ಅಂಶವಿರುತ್ತದೆ.

ಒತ್ತಡ ಮತ್ತು ಚಿಂತೆ

ಒತ್ತಡ ಮತ್ತು ಚಿಂತೆಗಳೊಂದಿಗೆ ಮಲಗುವುದು ನಿಮ್ಮ ನಿದ್ರೆ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಮಲಗುವ ಮೊದಲು ಧ್ಯಾನ ಮಾಡಿ.

ಸುಖ ನಿದ್ರೆಗೆ ಅಡ್ಡಿ

ಮಲಗುವ ಮುನ್ನ ಮದ್ಯ ಸೇವಿಸಬಾರದು. ಮೊದಲಿಗೆ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ತೋರುತ್ತದೆಯಾದರೂ, ನಂತರ ಇದು ನಿಮ್ಮ ಸುಖ ನಿದ್ರೆಗೆ ಅಡ್ಡಿಪಡಿಸುತ್ತದೆ.

ಲಘು ವ್ಯಾಯಾಮ

ತೀವ್ರವಾದ ವ್ಯಾಯಾಮವು ಕೂಡ ನಿದ್ರೆಗೆ ಅಡ್ಡಿಯಾಗಬಹುದು. ಹಾಗಾಗಿ ಸಂಜೆ ಸಮಯದಲ್ಲಿ ಲಘು ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು.