ಗರ್ಭಪಾತ ಆದವರು ಈ ಆಹಾರಗಳ ಸೇವನೆ ಮಾಡಿ! ತ್ವರಿತ ಪರಿಹಾರ ಸಿಗುತ್ತೆ

Pic Credit: pinterest

By Preeti Bhat

5 September  2025

ಗರ್ಭಪಾತ

ಗರ್ಭಪಾತ ಸ್ವಯಂಪ್ರೇರಣೆಯಿಂದಲೂ, ಇನ್ನು ಕೆಲವೊಮ್ಮೆ ಸಂದರ್ಭಗಳಿಗನುಗುಣವಾಗಿ ಆಗುತ್ತದೆ. ಆದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದು ತಿಳಿದಿರಬೇಕು.

ಮಾನಸಿಕ ಅರೋಗ್ಯ

ಕೆಲವು ಆಹಾರಗಳು ಅವರನ್ನು ಮತ್ತೆ ಮೊದಲಿನಂತೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರಿಗೆ ಶಕ್ತಿ ನೀಡುವ ಕೆಲವು ಆಹಾರಗಳಿವೆ.

ವಿಟಮಿನ್ ಸಿ

ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಅಂದರೆ ಖರ್ಜೂರ, ಬಾದಾಮಿ, ಪಾಲಕ್, ಆಲೂಗಡ್ಡೆ, ಕ್ಯಾರೆಟ್, ಸಿಟ್ರಸ್ ಹಣ್ಣು ಮತ್ತು ಸೇಬುಗಳನ್ನು ತಿನ್ನಬಹುದು.

ಫೋಲಿಕ್ ಆಮ್ಲ

ಗರ್ಭಪಾತದ ನಂತರ, ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ಖಿನ್ನತೆಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರ

ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರವನ್ನು ಸಹ ಸೇವಿಸಬೇಕು. ಕ್ಯಾಲ್ಸಿಯಂ ಗರ್ಭಪಾತದ ನಂತರ ದೇಹವು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಸೊಪ್ಪು, ತರಕಾರಿ

ಹಾಲು, ಒಣ ಹಣ್ಣುಗಳು, ಸೊಪ್ಪು ಮತ್ತು ತರಕಾರಿಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಧಾನ್ಯಗಳು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ.

ಜೀರ್ಣಕಾರಿ ಸಮಸ್ಯೆ

ಗರ್ಭಪಾತದ ನಂತರ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಓಟ್ಸ್, ಬ್ರೌನ್ ರೈಸ್ ಮತ್ತು ಕ್ವಿನೋವಾದಂತಹ ಆಹಾರಗಳನ್ನು ಸೇರಿಸಿಕೊಳ್ಳಬೇಕು.

ಕೋಳಿ, ಮೀನು

ಕೋಳಿ ಮತ್ತು ಮೀನುಗಳನ್ನು ಖಂಡಿತವಾಗಿಯೂ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆ ಮೂಲಕ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು.