Pic Credit: pinterest
By Preeti Bhat
06 June 2025
ಪ್ರತಿನಿತ್ಯ ಗೋಧಿ ಹಿಟ್ಟಿನ ಚಪಾತಿಗಳನ್ನು ಸೇವನೆ ಮಾಡುವ ಬದಲು ರಾಗಿಯಿಂದ ಮಾಡಿದ ರೊಟ್ಟಿ ಅಥವಾ ಚಪಾತಿಗಳ ಸೇವನೆ ಮಾಡಬಹುದು.
ಅದರಲ್ಲಿಯೂ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಪ್ರೋಟೀನ್ ಸಿಗಬೇಕಾದರೆ, ರಾಗಿ ಚಪಾತಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.
ರಾಗಿಯಿಂದ ತಯಾರಾದ ಆಹಾರಗಳು ನಿಧಾನವಾಗಿ ಜೀರ್ಣವಾಗುವುದರಿಂದ ಇವು ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ರಾಗಿ ಹಿಟ್ಟಿನ ಸೇವನೆಯಿಂದ ಕ್ರಮೇಣವಾಗಿ ಚರ್ಮಕ್ಕೆ ಹೊಳಪು ಸಿಗುತ್ತದೆ. ಜೊತೆಗೆ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಕೂದಲು ಉದುರುವಿಕೆ ಮತ್ತು ಒಣ ಕೂದಲಿನ ಸಮಸ್ಯೆಗಳಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ.
ರಾಗಿ ಹಿಟ್ಟನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಳೆಯ ಬಲವನ್ನು ಹೆಚ್ಚಿಸುವುದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶ ಇರುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಗೋಧಿಯಲ್ಲಿ ಕಂಡು ಬರುವ ಗ್ಲುಟನ್ ಸೇವನೆ ಮಾಡದಿದ್ದವರು ಅಥವಾ ಅಲರ್ಜಿ ಸಮಸ್ಯೆ ಇರುವವರಿಗೆ, ರಾಗಿ ಹಿಟ್ಟು ಅತ್ಯುತ್ತಮ ಪರ್ಯಾಯವಾಗಿದೆ.