Pic Credit: pinterest
By Sai Nanda
17 September 2025
ಋತುಚಕ್ರದ ಸಮಯದಲ್ಲಿ ಮಹಿಳೆಯರು ನರಕಯಾತನೆ ಅನುಭವಿಸುತ್ತಾರೆ. ಈ ವೇಳೆ ನೈರ್ಮಲ್ಯದ ಜತೆಗೆ ಸೇವಿಸುವ ಆಹಾರದ ಕಡೆಗೆ ಗಮನ ಕೊಡುವುದು ಮುಖ್ಯ.
ಈ ಸಮಯದಲ್ಲಿ ಕಿವಿ ಹಣ್ಣನ್ನು ಸೇವನೆ ಮಾಡುವ ಮೂಲಕ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು.
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಸಿರೊಟೋನಿನ್ ಹಾಗೂ ಒಮೆಗಾ -3 ಕೊಬ್ಬಿನಾಮ್ಲಗಳಿವೆ.
ಮುಟ್ಟಿನ ಸಮಯದಲ್ಲಿ ಅಸ್ವಸ್ಥತೆಯೂ ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡುತ್ತದೆ. ಕಿವಿ ಹಣ್ಣು ಇದಕ್ಕೆ ತ್ವರಿತ ಪರಿಹಾರ ನೀಡುತ್ತದೆ.
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಒತ್ತಡವನ್ನು ಕಡಿಮೆ ಮಾಡಿ, ಮನಸ್ಥಿತಿ ಬದಲಾವಣೆಯಾಗುವುದನ್ನು ತಡೆಯುತ್ತದೆ.
ವಿಟಮಿನ್ ಇಯೂ ಹೊಟ್ಟೆ ನೋವು, ನೋವಿನ ಸೆಳೆತವನ್ನು ಕಡಿಮೆ ಮಾಡುತ್ತದೆ.
ಕಿವಿಯಲ್ಲಿ ಫೈಬರ್ ಹೇರಳವಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಕಾರಿಯಾಗಿದೆ.
ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡಿ ನೋವನ್ನು ನೀವಾರಿಸುವ ಗುಣವನ್ನು ಹೊಂದಿದೆ.