ಮಾವಿನ ಗೊರಟೆಯಲ್ಲಿದೆ  ಆರೋಗ್ಯ ಪ್ರಯೋಜನ 

Pic Credit: pinterest

By Preeti Bhat

05 June 2025

ಆರೋಗ್ಯ

ಮಾವಿನ ಹಣ್ಣುಗಳು ರುಚಿ ನೀಡುವುದು ಮಾತ್ರವಲ್ಲ ಇದರ ಸೇವನೆಯಿಂದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಮಾವಿನ ಹಣ್ಣು

ಆದರೆ ನಿಮಗೆ ಗೊತ್ತಿರಲಿ, ಮಾವಿನ ಹಣ್ಣು ಮಾತ್ರ ನಾವು ಬಿಸಾಡುವ ಅದರ  ಬೀಜ ಅಥವಾ ಗೊರಟೆಯೂ ಸಹ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ.

ಗೊರಟೆ

ಮಾವಿನ ಹಣ್ಣಿನೊಳಗಿರುವ ಗೊರಟೆ ಅಥವಾ ಅದರ ಬೀಜದಿಂದ ತಯಾರಾಗುವ ಪುಡಿಯಲ್ಲಿ ಅದೆಷ್ಟೋ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿ ಇದೆ.

ಅಧಿಕ ರಕ್ತದೊತ್ತಡ

ಮಾವಿನ ಗೊರಟೆಯಿಂದ ತಯಾರಿಸಿದ ಪುಡಿಯ ಸೇವನೆಯಿಂದ ಹೃದಯರಕ್ತನಾಳದ ಕಾಯಿಲೆಗಳು ಮತ್ತು ಅಧಿಕ ರಕ್ತದೊತ್ತಡದ ಅಪಾಯ ಕಡಿಮೆಯಾಗುತ್ತದೆ.

ಗ್ಲೂಕೋಸ್ ಮಟ್ಟ

ನಿಯಮಿತವಾಗಿ ಮಾವಿನ ಪುಡಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.

ಮಾವಿನ ಪುಡಿ

ಮಾವಿನ ಪುಡಿಯಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಯಕೃತ್ತು

ಮಾವಿನ ಪುಡಿಯಲ್ಲಿರುವ ಸಕ್ರಿಯ ಸಂಯುಕ್ತಗಳು ಯಕೃತ್ತನ್ನು ಶುದ್ಧೀಕರಿಸುತ್ತವೆ ಮತ್ತು ಅದರ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತವೆ.

ಬೆಳವಣಿಗೆ

ಈ ಪುಡಿ ಮಕ್ಕಳ ಬೆಳವಣಿಗೆಗೆ ಹಾಗೂ ವಯಸ್ಕರಿಗೆ ತುಂಬಾ ಉಪಯುಕ್ತವಾಗಿದೆ. ಜೊತೆಗೆ ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ.