ಬೆಳ್ಳುಳ್ಳಿ ಸಿಪ್ಪೆ ಈ ರೀತಿ ಬಳಸಿದರೆ ಮೊಡವೆಯೇ ಬರಲ್ಲ

Pic Credit: gettyimages

By Preeti Bhat

30 April 2025

ಔಷಧೀಯ ಗುಣಗಳಿವೆ 

ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ಅದರ ಸಿಪ್ಪೆಯಲ್ಲಿಯೂ ಔಷಧೀಯ ಗುಣಗಳಿವೆ ಎಂದರೆ ನಂಬುತ್ತೀರಾ?

ಎಷ್ಟೆಲ್ಲಾ ಲಾಭಗಳಿವೆ 

ಬೆಳ್ಳುಳ್ಳಿ ಸಿಪ್ಪೆಯ ಬಳಕೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿದರೆ ಇನ್ನು ಮುಂದೆ ಇದನ್ನು ಎಸೆಯುವುದಿಲ್ಲ.

ಸಿಗುವ ಪ್ರಯೋಜನಗಳೇನು 

ಹಾಗಾದರೆ ಈ ಬೆಳ್ಳುಳ್ಳಿ ಸಿಪ್ಪೆಯನ್ನು ಯಾವ ರೀತಿ ಬಳಕೆ ಮಾಡಬೇಕು? ಇದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.

 ಸೊಳ್ಳೆ ಕಾಟ 

ಮನೆಯಲ್ಲಿ ಸೊಳ್ಳೆ ಕಾಟ ತುಂಬಾ ಜಾಸ್ತಿಯಾಗಿದ್ದರೆ ಬೆಳ್ಳುಳ್ಳಿ ಸಿಪ್ಪೆಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಮನೆಯ ಸುತ್ತಮುತ್ತ ಚೆನ್ನಾಗಿ ಸಿಂಪಡಿಸಿ.

ಮುಖದ ತುಂಬಾ ಮೊಡವೆ

ಮುಖದ ತುಂಬಾ ಮೊಡವೆಗಳಾಗುತ್ತಿದ್ದರೆ ಬೆಳ್ಳುಳ್ಳಿ ಸಿಪ್ಪೆಯನ್ನು ನೆನಸಿ ಬಳಿಕ ಅದನ್ನು ಕುದಿಸಿ, ಆ ನೀರಿನಿಂದ ಚೆನ್ನಾಗಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.

ತಲೆ ಹೊಟ್ಟು

ತಲೆ ಹೊಟ್ಟು ಅಥವಾ ಕೂದಲು ಉದುರುತ್ತಿದ್ದರೆ ಬೆಳ್ಳುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ತಣಿದ ಬಳಿಕ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.

ಕೂದಲಿಗೆ ಮಸಾಜ್

ಬೆಳ್ಳುಳ್ಳಿ ಸಿಪ್ಪೆಯ ನೀರಿನಿಂದ ಕೂದಲಿಗೆ ಮಸಾಜ್ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಗಿಡ ಚೆನ್ನಾಗಿ ಬೆಳೆಯುತ್ತದೆ

ಬೆಳ್ಳುಳ್ಳಿ ಸಿಪ್ಪೆಯನ್ನು ಕಾಂಪೋಸ್ಟ್ ಆಗಿಯೂ ಬಳಸಬಹುದು. ಇದನ್ನು ಗಿಡಗಳಿಗೆ ಹಾಕುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ.