ಪಾಲಕ್ ಗಿಂತ ಎರಡು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದ್ದರೂ ಈ ತರಕಾರಿ ಕೆಲವರಿಗೆ ಒಳ್ಳೆಯದಲ್ಲ

Pic Credit: pinterest

By Preeti Bhat

14 July 2025

ಆರೋಗ್ಯಕ್ಕೆ ಪ್ರಯೋಜನಕಾರಿ

ಹಾಗಲಕಾಯಿ ಕಹಿಯಾದರೂ ಕೂಡ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೂ ಕೂಡ ಇದನ್ನು ಕೆಲವರು ಅಪ್ಪಿತಪ್ಪಿಯೂ ತಿನ್ನಬಾರದು.

ಹಾಲುಣಿಸುವ ತಾಯಂದಿರು

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಹಾಗಲಕಾಯಿಯಿಂದ ದೂರವಿರುವುದು ಒಳ್ಳೆಯದಲ್ಲ.

ಗ್ಯಾಸ್ಟ್ರಿಕ್ ಸಮಸ್ಯೆ

ಜೀರ್ಣಕಾರಿ ಸಮಸ್ಯೆ, ವಾಂತಿ, ಭೇದಿಯಿಂದ ಬಳಲುತ್ತಿರುವವರು, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಹಾಗಲಕಾಯಿಯಿಂದ ದೂರವಿರಬೇಕು.

ಉಪವಾಸ

ದೈಹಿಕವಾಗಿ ದುರ್ಬಲರಾಗಿರುವವರು, ದೀರ್ಘಕಾಲ ಉಪವಾಸ ಮಾಡಿದವರು ಮತ್ತು ಶಸ್ತ್ರಚಿಕಿತ್ಸೆಗಳಿಂದಾಗಿ ರಕ್ತ ಕಳೆದುಕೊಂಡವರು ಹಾಗಲಕಾಯಿ ತಿನ್ನಬಾರದು.

ಮಧುಮೇಹೀಗಳಿಗೆ ಒಳ್ಳೆಯದಲ್ಲ

ಇನ್ಸುಲಿನ್, ಮಧುಮೇಹ ಮತ್ತು ಇತರ ಸಮಸ್ಯೆಗಳಿಗೆ ಔಷಧಿ ತೆಗೆದುಕೊಳ್ಳುವವರು ಹಾಗಲಕಾಯಿಯನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು.

ಚಯಾಪಚಯ ಪ್ರಕ್ರಿಯೆ

ಕೆಲವು ರೀತಿಯ ಔಷಧಿಗಳನ್ನು ಬಳಸುವವರಿಗೆ, ಹಾಗಲಕಾಯಿ ಸೇವಿಸುವುದರಿಂದ ಇದು ಚಯಾಪಚಯ ಪ್ರಕ್ರಿಯೆಗಳನ್ನು ತಡೆಯಬಹುದು.

ಯಕೃತ್ತಿನ ಸಮಸ್ಯೆ

ಮೂತ್ರಪಿಂಡ ಮತ್ತು ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚಾಗಿ ಹಾಗಲಕಾಯಿಯ ಸೇವನೆ ಮಾಡಬಾರದು.

ನಕಾರಾತ್ಮಕ ಪರಿಣಾಮ

ಈ ತರಕಾರಿ ಒಳ್ಳೆಯದಾಗಿದ್ದರೂ, ಕೆಲವು ಸಮಸ್ಯೆಗಳಿಂದಾಗಿ ನಮ್ಮ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.