ಚರ್ಮದ ಮೇಲೆ ಈ ಸಮಸ್ಯೆಗಳು ಕಾಣಿಸಿಕೊಂಡರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು

Pic Credit: pinterest

By Preeti Bhat

1 August 2025

ಹೃದಯಾಘಾತ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು.

ಚರ್ಮದಲ್ಲಾಗುವ ಬದಲಾವಣೆ

ಆದರೆ ಈ ರೀತಿ ಆಗುವ ಮೊದಲು ಚರ್ಮದ ಮೇಲೆ ಕೆಲವು ಬದಲಾವಣೆಗಳು ಕಂಡುಬರುತ್ತವೆ ಅವುಗಳನ್ನು ನಿರ್ಲಕ್ಷ್ಯ ಮಾಡಬಾರದು.

ಕಾಲುಗಳಲ್ಲಿ ಊತ

ಚರ್ಮದಲ್ಲಿ ಕಾಣಿಸಿಕೊಳ್ಳುವ ಮೊದಲ ಲಕ್ಷಣವೆಂದರೆ ಕಾಲುಗಳಲ್ಲಿ ಊತ ಕಂಡುಬರುವುದು. ಜೊತೆಗೆ ಇದ್ದಕ್ಕಿದ್ದಂತೆ, ಇಡೀ ಚರ್ಮವು ಊದಿಕೊಳ್ಳುತ್ತದೆ.

ಎಚ್ಚರಿಕೆಯ ಸಂಕೇತ

ಈ ರೀತಿಯ ಊತ ಹೃದಯಾಘಾತದ ಸಂಕೇತವೂ ಆಗಿರಬಹುದು. ಆದ್ದರಿಂದ, ಕಾಲುಗಳಲ್ಲಿ ಆಗಾಗ ಊತ ಕಂಡುಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

ಡಯಾಫೊರೆಸಿಸ್

ಕೆಲವರಿಗೆ ಸಣ್ಣ ಕೆಲಸಗಳನ್ನು ಮಾಡಿದರೂ ಬೆವರು ಬರುತ್ತೆ ಈ ಸ್ಥಿತಿಯನ್ನು ಡಯಾಫೊರೆಸಿಸ್ ಎಂದು ಕರೆಯಲಾಗುತ್ತದೆ. ಈ ರೀತಿಯಾದಾಗ ನಿರ್ಲಕ್ಸ್ಯ ಮಾಡಬೇಡಿ.

ಅತಿಯಾಗಿ ಬೆವರುವುದು

ಅತಿಯಾಗಿ ಬೆವರುವುದು ಹೃದಯದಲ್ಲಿ ಸಮಸ್ಯೆ ಇರುವುದನ್ನು ಸೂಚಿಸುತ್ತದೆ. ನಿರ್ಲಕ್ಷ್ಯ ಮಾಡಿದರೆ ಹೃದಯಾಘಾತ ಅಪಾಯ ಹೆಚ್ಚಾಗಬಹುದು.

ಬಾಹ್ಯ ಸೈನೋಸಿಸ್

ಹೃದಯದಲ್ಲಿ ಸಮಸ್ಯೆಗಳಿದ್ದರೆ, ಬೆರಳುಗಳು ನೀಲಿ ಬಣ್ಣಕ್ಕೆ ತಿರುಗಬಹುದು. ಇದನ್ನು ಬಾಹ್ಯ ಸೈನೋಸಿಸ್ ಎಂದು ಕರೆಯಲಾಗುತ್ತದೆ.

ಆಮ್ಲಜನಕದ ಮಟ್ಟ ಕಡಿಮೆ

ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡದಿದ್ದಾಗ, ರಕ್ತಪರಿಚಲನೆ ಸರಿಯಾಗಿ ಆಗುವುದಿಲ್ಲ ಪರಿಣಾಮವಾಗಿ, ಆಮ್ಲಜನಕದ ಮಟ್ಟ ಕಡಿಮೆಯಾಗಿ ಬೆರಳು ನೀಲಿ ಬಣ್ಣಕ್ಕೆ ತಿರುಗುತ್ತದೆ.