Pic Credit: pinterest
By Preeti Bhat
13 June 2025
ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ.
ಕೆಲವರು ಬಿಕ್ಕಳಿಕೆ ಬಂದಾಗ ತಕ್ಷಣ ನೀರು ಕುಡಿಯುತ್ತಾರೆ, ಇನ್ನು ಕೆಲವರು ಸಕ್ಕರೆಯನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ.
ಬಿಕ್ಕಳಿಕೆ ಕಡಿಮೆ ಮಾಡಲು ಗಂಟಲಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ತಣ್ಣೀರು ಕುಡಿಯುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಅನ್ನ ತಿನ್ನುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ಬಿಕ್ಕಳಿಕೆಯನ್ನು ತ್ವರಿತವಾಗಿ ನಿವಾರಿಸಲು, ಬಾಯಿಗೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ನಿಧಾನವಾಗಿ ಅಗಿಯಿರಿ.
ಮುಖವನ್ನು ತಣ್ಣೀರಿನಿಂದ ತೊಳೆಯುವುದು, ಹಾಗೆಯೇ ಕೆಲವು ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಸಹ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.
ಬಾಯಿಯಲ್ಲಿ ಐಸ್ ಕ್ಯೂಬ್ ಅನ್ನು ಇಟ್ಟು ನಿಧಾನವಾಗಿ ಅಗಿಯುವುದರಿಂದ ಬಿಕ್ಕಳಿಕೆಯಿಂದ ಪರಿಹಾರ ಸಿಗುತ್ತದೆ.
ಬೆಳ್ಳುಳ್ಳಿಯ ಎಸಳು ತಿನ್ನುವುದು ಅಥವಾ ಒಂದು ಚಮಚ ನಿಂಬೆ ರಸವನ್ನು ಸೇವನೆ ಮಾಡುವುದರಿಂದಲೂ ಸಹ ಬಿಕ್ಕಳಿಕೆಯನ್ನು ಕಡಿಮೆ ಮಾಡಬಹುದು.