ತಲೆ ಬೋಳಾಗುವ ಚಿಂತೆಯೇ, ಇಲ್ಲಿದೆ ಪರಿಹಾರ

Pic Credit: pinterest

By Preeti Bhat

05 June 2025

ಕೂದಲು ಉದುರುವುದು

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಕೂದಲು ಉದುರುವುದು ಕೂಡ ಒಂದು.

ಮನೆಮದ್ದು

ಇರುವ ಕೂದಲು ದಿನದಿಂದ ದಿನಕ್ಕೆ ಉದುರಿ ತಲೆ ಬೋಳಾಗುತ್ತದೆಯೋ ಏನೋ ಎಂಬ ಭಯ ಕಾಡುತ್ತದೆ. ಈ ಸಮಸ್ಯೆ ತಡೆಯಯಲು ಸರಳ ಮನೆಮದ್ದು ಇಲ್ಲಿದೆ.

ಆಹಾರ

ವಾಸ್ತವದಲ್ಲಿ, ನಾವು ಸೇವನೆ ಮಾಡುವ ಆಹಾರ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ.

ಪೋಷಕಾಂಶ

ಕೂದಲು ಬಲವಾಗಿ, ಉದ್ದವಾಗಿ  ಚೆನ್ನಾಗಿರಬೇಕು ಎಂಬ ಆಸೆ ಇದ್ದರೆ ನಿಮ್ಮ ಆಹಾರದಲ್ಲಿ ಪೋಷಕಾಂಶಗಳಿಂದ ಕೂಡಿದ ಪದಾರ್ಥಗಳನ್ನು ಸೇವನೆ ಮಾಡಿ.

ವಿಟಮಿನ್ ಬಿ 5

ಆಹಾರದಲ್ಲಿ ವಿಟಮಿನ್ ಬಿ 5 ಸಮೃದ್ಧವಾಗಿರುವ ಆಹಾರಗಳು ಅಂದರೆ, ಮೊಟ್ಟೆ ಮತ್ತು ಮೊಸರಿನಂತಹ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ.  

ಕ್ಯಾಸ್ಟರ್ ಆಯಿಲ್

ಕೂದಲಿಗೆ ಕ್ಯಾಸ್ಟರ್ ಆಯಿಲ್ ಹಚ್ಚಿ. ಇದಕ್ಕೆ ಮೆಂತ್ಯ ಬೀಜಗಳನ್ನು ಸೇರಿಸಿಕೊಳ್ಳಿ ಈ ರೀತಿ ಮಾಡುವುದರಿಂದ, ಕೂದಲು ಉದುರುವುದು ಕಡಿಮೆಯಾಗುತ್ತದೆ.

ಎಳ್ಳೆಣ್ಣೆ

ನಾಲ್ಕು ಚಮಚ ಎಳ್ಳೆಣ್ಣೆಯನ್ನು ತೆಗೆದುಕೊಂಡು ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಬಿಸಿ ಮಾಡಿ. ಅದು ತಣ್ಣಗಾದ ನಂತರ, ಈ ಎಣ್ಣೆಯನ್ನು ನೆತ್ತಿಗೆ ಹಚ್ಚಿ.

ನೆತ್ತಿ

ಈ ಮನೆಮದ್ದು ಇದು ನೆತ್ತಿಯ ಮೇಲೆ ಹೊಸ ಕೂದಲುಗಳು ಬೆಳೆಯಲು, ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.