ವೈದ್ಯರು ಹೇಳುವಂತೆ ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಆಹಾರ ತಪ್ಪದೇ ಸೇವಿಸಿ

Pic Credit: pinterest

By Sai Nanda

19 September  2025

ಆರೋಗ್ಯ

ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಸಾಲಲ್ಲ.

ಸೇವಿಸುವ ಆಹಾರ

ನಾವು ಸೇವಿಸುವ ಆಹಾರ, ಅಭ್ಯಾಸಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸುವುದು ಒಳ್ಳೆಯದು.

ವೈದ್ಯರ ಸಲಹೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸುವ ಬಗ್ಗೆ ಡಾ. ಸುಭಾಷ್ ಗಿರಿ ಸಲಹೆ ನೀಡುತ್ತಾರೆ. ಈ ಸಲಹೆ ಪಾಲಿಸುವುದು ಪ್ರಯೋಜನಕಾರಿ.

ಉಗುರು ಬೆಚ್ಚಗಿನ ನೀರು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದು  ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ನೆನೆಸಿದ ಬಾದಾಮಿ

ರಾತ್ರಿಯಿಡೀ 4-5  ಬಾರಿ ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ದಿನವಿಡೀ ಮೆದುಳಿಗೆ ಪೋಷಣೆ, ದೇಹಕ್ಕೆ ಶಕ್ತಿ ದೊರೆಯುತ್ತದೆ.

ಚಿಯಾ ಬೀಜಗಳ ನೀರು

ರಾತ್ರಿ ನೆನೆಸಿಟ್ಟ ಚಿಯಾ ಬೀಜದ ನೀರು ದೇಹಕ್ಕೆ ತಂಪು. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ.

ತೆಂಗಿನ ನೀರು

ತೆಂಗಿನ ನೀರು ಆರೋಗ್ಯಕ್ಕೆ ಪ್ರಯೋಜನಕಾರಿ. ಖಾಲಿಹೊಟ್ಟೆಯಲ್ಲಿ ಇದರ ಸೇವನೆಯೂ ದೇಹಕ್ಕೆ ಬೇಕಾದ ನೀರಿನಾಂಶ ಒದಗಿಸಿ, ನಿಮ್ಮನ್ನು ಉಲ್ಲಾಸಮಯವಾಗಿಸುತ್ತದೆ.

ಈ ಹಣ್ಣುಗಳನ್ನು ಸೇವಿಸಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು, ಪಪ್ಪಾಯಿ ಹಾಗೂ ಸೇಬು ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ಜೀವಸತ್ವಗಳು ಹಾಗೂ ಫೈಬರ್ ದೊರೆಯುತ್ತದೆ.