27 Aug 2025

Pic credit - Pintrest

Author: Akshatha Vorkady

ಕಿವಿ ತುರಿಕೆ ಬಗ್ಗೆ ನಿರ್ಲಕ್ಷ್ಯ ಬೇಡ; ಈ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು!

ಕಿವಿಗಳು ನಮ್ಮ ದೇಹದ ಸೂಕ್ಷ್ಮ ಭಾಗವಾಗಿದ್ದು, ನಾವು ಅದರ ಆರೋಗ್ಯವನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. 

ಕಿವಿಗಳು

Pic credit - Pintrest

ಹಲವು ಬಾರಿ ಸ್ವಲ್ಪ ತುರಿಕೆಯನ್ನು ಸಾಮಾನ್ಯ ಎಂದು ಭಾವಿಸಿ ನಿರ್ಲಕ್ಷಿಸುತ್ತೇವೆ, ಆದರೆ ಈ ನಿರ್ಲಕ್ಷ್ಯವು ನಂತರ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. 

ಸ್ವಲ್ಪ ತುರಿಕೆ

Pic credit - Pintrest

ಕಿವಿಗಳಲ್ಲಿ ತುರಿಕೆ ಕೇವಲ ಕೊಳೆಯ ಸಂಕೇತವಲ್ಲ, ಆದರೆ ಇದು ಸೋಂಕು, ಅಲರ್ಜಿ ಅಥವಾ ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು.

ಕೊಳೆಯ ಸಂಕೇತ

Pic credit - Pintrest

ಧೂಳು, ಸುಗಂಧ ದ್ರವ್ಯ ಅಥವಾ ಇಯರ್‌ಫೋನ್‌ಗಳಿಂದ ಅಲರ್ಜಿ ಇದ್ದರೆ, ಅದು ಕಿವಿಯಲ್ಲಿ ತುರಿಕೆಗೆ ಕಾರಣವಾಗಬಹುದು.

ಕಿವಿಯಲ್ಲಿ ತುರಿಕೆ

Pic credit - Pintrest

ಪದೇ ಪದೇ ಕಿವಿ  ಕೆರೆಯುವುದರಿಂದ ಕಿವಿಯ ಸೂಕ್ಷ್ಮ ಚರ್ಮಕ್ಕೂ ಹಾನಿಯಾಗಿ ನೋವಿಗೆ ಕಾರಣವಾಗಬಹುದು.

ಚರ್ಮಕ್ಕೂ ಹಾನಿ

Pic credit - Pintrest

ಕೆಲವೊಮ್ಮೆ ಕಿವಿಗಳಲ್ಲಿ ನಿರಂತರ ತುರಿಕೆ ಚರ್ಮದ ಕಾಯಿಲೆಗಳು (ಎಸ್ಜಿಮಾ, ಸೋರಿಯಾಸಿಸ್) ಅಥವಾ ಆಂತರಿಕ ಕಿವಿಯ ಕಾಯಿಲೆಯ ಸೂಚನೆಯಾಗಿರಬಹುದು.

ಚರ್ಮದ ಕಾಯಿಲೆ

Pic credit - Pintrest

ನೋವು ತುರಿಕೆ, ಕಿವಿಯಿಂದ ನೀರು ಬರುವುದು, ದುರ್ವಾಸನೆ ಅಥವಾ ಯಾವುದೇ ಸಮಸ್ಯೆ ಇದ್ದರೆ, ನೀವು ತಕ್ಷಣ ತಜ್ಞರಿಂದ ತಪಾಸಣೆ ಮಾಡಿಸಿ.

ತಪಾಸಣೆ ಮಾಡಿಸಿ

Pic credit - Pintrest