Pic Credit: pinterest
By Preeti Bhat
17 June 2025
ನೇರಳೆ ಹಣ್ಣು ಅಥವಾ ಜಾಮೂನ್ ನಲ್ಲಿ ವಿಟಮಿನ್ ಗಳು ಸಮೃದ್ಧವಾಗಿದ್ದು ಊಹೆಗೂ ನಿಲುಕದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಆಯುರ್ವೇದ ತಜ್ಞ ಕಿರಣ್ ಗುಪ್ತಾ ಅವರು ತಿಳಿಸಿರುವ ಮಾಹಿತಿ ಪ್ರಕಾರ, ನೇರಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
ನೇರಳೆ ಹಣ್ಣು ವಿಟಮಿನ್ ಸಿ, ಬಿ12, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಖನಿಜ ಮತ್ತು ನಾರಿನಾಂಶದ ಉತ್ತಮ ಮೂಲವಾಗಿದೆ.
ಜಾಮೂನ್ ದೇಹಕ್ಕೆ ತಂಪು ನೀಡುತ್ತದೆ. ಈ ಹಣ್ಣಿನ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಹಣ್ಣುಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಇದು ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೇರಳೆ ಅಥವಾ ಜಾಮೂನ್ ಹಣ್ಣಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುವುದರಿಂದ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯದು.
ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಇದ್ದು, ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಒಂದು ದಿನಕ್ಕೆ ಸುಮಾರು 200 ಗ್ರಾಂ ನೇರಳೆ ಹಣ್ಣನು ಆರೋಗ್ಯವಂತ ವ್ಯಕ್ತಿ ಸೇವಿಸಬಹುದು ಎಂದು ತಜ್ಞರು ಹೇಳಿದ್ದಾರೆ.