Pic Credit: pinterest
By Preeti Bhat
27 June 2025
ಕಾಮಾಲೆ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ ಅಲ್ಲವೇ ಅಲ್ಲ. ಈ ಜಾಂಡಿಸ್ ಅಥವಾ ಹಳದಿ ರೋಗದಿಂದ ಕಣ್ಣು, ಚರ್ಮ ಎಲ್ಲವೂ ಹಳದಿಯಾಗಿ ಗೋಚರಿಸುತ್ತವೆ.
ಆದರೆ ಕಾಮಾಲೆ ಅಥವಾ ಜಾಂಡಿಸ್ ಬಂದಾಗ ಕಣ್ಣಿನ ಬಿಳಿ ಭಾಗ, ನಮ್ಮ ಚರ್ಮ, ಉಗುರು ಹಳದಿ ಬಣ್ಣಕ್ಕೆ ತಿರುಗುವುದಕ್ಕೆ ಕಾರಣವೇನು?
ರಕ್ತದಲ್ಲಿನ ಬಿಲಿರುಬಿನ್ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ದೇಹದ ಇತರ ಭಾಗಗಳನ್ನು ತಲುಪುತ್ತದೆ. ಆಗ ನಮ್ಮ ದೇಹ ಪೂರ್ತಿ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಕಣ್ಣು, ಒಸಡು ಮೂತ್ರ ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ಹಸಿವು ಕಡಿಮೆಯಾಗುವುದು, ವಾಂತಿ ಹೆಚ್ಚಾಗುವುದು, ಹೊಟ್ಟೆ ನೋವು, ದಣಿದ ಭಾವನೆ ಇವೆಲ್ಲಾ ಇದರ ಲಕ್ಷಣವಾಗಿದೆ.
ಹಾಗಾಗಿ ಕಲುಷಿತ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ. ಮದ್ಯ ಸೇವಿಸಬೇಡಿ ಕಾಯಿಸಿ, ಆರಿಸಿದ ನೀರನ್ನು ಮಾತ್ರ ಕುಡಿಯಿರಿ, ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ ಜಂಕ್ ಫುಡ್ ನಿಂದ ದೂರವಿರಿ.
ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ನಂತಹ ವೈರಲ್ ಸೋಂಕುಗಳಿಂದ ಈ ಸಮಸ್ಯೆಗಳು ಉಂಟಾಗಬಹುದು.
ಪ್ಯಾರೆಸಿಟಮಾಲ್ ನಂತಹ ಕೆಲವು ಔಷಧಿಗಳ ಮಿತಿಮೀರಿದ ಸೇವನೆಯಿಂದಲೂ ಕೂಡ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳಬಹುದು.
ವಿಷಕಾರಿ ಅಣಬೆ, ಇನ್ನಿತರ ವಿಷಕಾರಿ ಪದಾರ್ಥಗಳ ಸೇವನೆಯು ಇದಕ್ಕೆ ಕಾರಣವಾಗಬಹುದು.