ಚರ್ಮ ಒಣಗುವುದು ಈ ಕಾಯಿಲೆಯ ಲಕ್ಷಣ

Pic Credit: pinterest

By Preeti Bhat

06 June 2025

ಪೋಷಕಾಂಶ

ನಮ್ಮ ಕಿಡ್ನಿ ಅಥವಾ ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲ ಅಗತ್ಯ ಪೋಷಕಾಂಶಗಳ ಸಮತೋಲನವನ್ನು ಸಹ ಕಾಪಾಡಿಕೊಳ್ಳುತ್ತವೆ.

ಕಿಡ್ನಿ

ಕೆಲವೊಮ್ಮೆ ನಮ್ಮ ಕಿಡ್ನಿ ನಮಗೆ ತಿಳಿಯದಂತೆ ಒತ್ತಡ ಅನುಭವಿಸುತ್ತಿರಬಹುದು. ಅದರ ಹಾನಿಯ ಲಕ್ಷಣಗಳನ್ನು ನಾವು ಅರ್ಥಮಾಡಿಕೊಳ್ಳದಿರಬಹುದು.

ಆರೋಗ್ಯ

ಹಾಗಾಗಿ ನಮ್ಮ ಮೂತ್ರಪಿಂಡದ ಆರೋಗ್ಯದ ಬಗ್ಗೆ ನಾವು ಆದಷ್ಟು ಜಾಗರೂಕರಾಗಿರುವುದು ಬಹಳ ಅವಶ್ಯ.

ಊತ

ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಅಥವಾ ಕಣ್ಣಿನ ಸುತ್ತ ಊತ ಕಂಡು ಬರುವುದು. ಇದು ನಿಮ್ಮ ಕಿಡ್ನಿ ಆರೋಗ್ಯವಾಗಿಲ್ಲ ಎಂಬುದನ್ನು ತಿಳಿಸುತ್ತದೆ.

ಕೆಟ್ಟ ವಾಸನೆ

ಮೂತ್ರದ ಬಣ್ಣ ಬದಲಾಗಿದ್ದಾರೆ ಅಥವಾ ಅದರಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಮೂತ್ರಪಿಂಡದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದರ್ಥ.

ದಣಿವಾಗುವುದು

ಬೆಳಿಗ್ಗೆ ಏಳುತ್ತಲೇ ದಣಿವಾದಂತೆ ಆಗುವುದು ಕಿಡ್ನಿ ಆರೋಗ್ಯವಾಗಿಲ್ಲ ಎಂಬುದರ ಸೂಚನೆಯಾಗಿರಬಹುದು.

ಕ್ಯಾನ್ಸರ್

ಮೂತ್ರ ವಿಸರ್ಜನೆ ಮಾಡುವಾಗ ನೋವು ಇಲ್ಲದೆ ರಕ್ತ ಹೋಗುತ್ತಿದ್ದರೆ ಅದು ಮೂತ್ರಪಿಂಡದ ಜೀವಕೋಶ ಕ್ಯಾನ್ಸರ್ ಅಥವಾ ಮೂತ್ರಕೋಶ ಕ್ಯಾನ್ಸರ್‌ನ ಲಕ್ಷಣ ಆಗಿರಬಹುದು.

ತುರಿಕೆ

ಮೂತ್ರಪಿಂಡಕ್ಕೆ ಹಾನಿಯಾದಾಗ ದೇಹದಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಒಣಗಬಹುದು ಅಥವಾ ತುರಿಕೆ ಕಂಡು ಬರಬಹುದು.