Pic Credit: pinterest
By Sai Nanda
12 September 2025
ಅಡುಗೆಯ ರುಚಿ ಹೆಚ್ಚಿಸುವ ಈರುಳ್ಳಿಯನ್ನು ಎಲ್ಲರೂ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಬಳಸುತ್ತಾರೆ. ಆದರೆ ಈರುಳ್ಳಿ ದಂಟಿನ ಬಗ್ಗೆ ತಿಳಿದಿದೆಯೇ.
ಈ ಕಟುವಾಸನೆ ಹೊಂದಿರುವ ಈ ಈರುಳ್ಳಿ ದಂಟಿನ ಆರೋಗ್ಯ ಪ್ರಯೋಜನ ಬಹುತೇಕರಿಗೆ ತಿಳಿದಿಲ್ಲ.
ಇದು ವಿಟಮಿನ್ ಸಿ ಮತ್ತು ಇತರ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು ಹತ್ತಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಈರುಳ್ಳಿ ದಂಟು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಇದು ವಿವಿಧ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ.
ಈರುಳ್ಳಿ ದಂಟಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಬೇಕಾದ ಕಾಲಜನ್ ಉತ್ಪಾದಿಸುತ್ತದೆ.
ಇದರಲ್ಲಿರುವ ಅಲಿಸಿನ್, ಕ್ವೆರ್ಸೆಟಿನ್ ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯ ಆರೋಗ್ಯವನ್ನು ಕಾಪಾಡುತ್ತದೆ.
ಕರುಳಿನ ಉತ್ತಮ ಬ್ಯಾಕ್ಟಿರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸಿ ಜೀರ್ಣ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.