ರಾತ್ರಿಯಲ್ಲಿ ಕಂಡು ಬರುವ ಕಾಲು ಸೆಳೆತವನ್ನು ತಡೆಯಲು ಹೀಗೆ ಮಾಡಿ

Pic Credit: pinterest

By Preeti Bhat

30 June 2025

ಕಾಲು ಸೆಳೆತ

ರಾತ್ರಿ ಸಮಯದಲ್ಲಿ ಕಂಡು ಬರುವ ಕಾಲು ಸೆಳೆತ ಕೆಲವರನ್ನು ಹೈರಾಣವಾಗಿರಿಸುತ್ತದೆ. ಆದರೂ ಕೆಲವರು ಇದನ್ನು ಅಲಕ್ಷ್ಯ ಮಾಡುತ್ತಾರೆ.

ನೀರು

ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯದಿರುವುದು ಜೊತೆಗೆ ಮದ್ಯ ಸೇವನೆ ಮಾಡುವುದು ಕೂಡ ಕಾಲು ಸೆಳೆತಕ್ಕೆ ಕಾರಣವಾಗಿರಬಹುದು.

ಕ್ಯಾಲ್ಸಿಯಂ

ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳಲ್ಲಿನ ಅಸಮತೋಲನವು ಸೆಳೆತಕ್ಕೆ ಕಾರಣವಾಗಬಹುದು.

ವ್ಯಾಯಾಮ

ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡುವ ಸಮಯದಲ್ಲಿ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಹಾಕುವುದರಿಂದಲೂ ಈ ರೀತಿಯ ಸಮಸ್ಯೆ ಕಂಡುಬರಬಹುದು.

ನಿರ್ಜಲೀಕರಣ

ದೇಹದ ನಿರ್ಜಲೀಕರಣ ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು, ಆದ್ದರಿಂದ ಪ್ರತಿನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ.

ಬಿಸಿನೀರಿನ ಸ್ನಾನ

ಶಾಖವು ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲ ಮಾಡಿ ಕಾಲಿನ ಸೆಳೆತದಿಂದ ನಿಮಗೆ ಪರಿಹಾರ ನೀಡುತ್ತದೆ. ಸೆಳೆತ ತೀವ್ರವಾಗಿದ್ದರೆ ಬಿಸಿನೀರಿನ ಸ್ನಾನ ಕೂಡ ಮಾಡಬಹುದು.

ಮಸಾಜ್

ರಾತ್ರಿ ವೇಳೆ ಕಾಲು ಸೆಳೆತ ಕಾಣಿಸಿಕೊಂಡರೆ, ನೋವು ಕಂಡು ಬರುತ್ತಿರುವ ಜಾಗವನ್ನು ಎರಡೂ ಕೈಗಳಿಂದ ಮಸಾಜ್ ಮಾಡಲು ಪ್ರಯತ್ನಿಸಿ.

ಆಹಾರ

ಮೆಗ್ನೀಸಿಯಮ್ ಕೊರತೆಯು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು ಹಾಗಾಗಿ ಮೆಗ್ನೀಸಿಯಮ್ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಿ.