ಕಿಡ್ನಿ ಆರೋಗ್ಯವಾಗಿರದಿದ್ದರೆ ಕಾಲಿನಲ್ಲಿ ಈ ಲಕ್ಷಣ ಕಂಡು ಬರುತ್ತೆ

Pic Credit: pinterest

By Preeti Bhat

27 May 2025

ನಮ್ಮ ಆರೋಗ್ಯ

ಕಾಲುಗಳು ದೇಹದ ಭಾರ ಹೊರುವ ಕೆಲಸವನ್ನ ಮಾತ್ರ ಮಾಡುವುದಿಲ್ಲ, ನಮ್ಮ ಆರೋಗ್ಯ ಹೇಗಿದೆ ಎಂದು ತಿಳಿಸುವ ಕೆಲಸವನ್ನೂ ಮಾಡುತ್ತವೆ.

ಕಿಡ್ನಿಯ ಆರೋಗ್ಯ

ಅದರಲ್ಲಿಯೂ ನಮ್ಮ ಕಿಡ್ನಿಯ ಆರೋಗ್ಯ ಹೇಗಿದೆ ಎನ್ನುವುದನ್ನು ಕಾಲುಗಳಲ್ಲಿ ಉಂಟಾಗುವ ಕೆಲವು ಬದಲಾವಣೆಗಳ ಮೂಲಕವೇ ಹೇಳಬಹುದು.

ಸಂಜೆಯ ಸಮಯ

ಪಾದದ ಭಾಗದಲ್ಲಿ ಊತ, ಅದರಲ್ಲಿಯೂ ಹೆಚ್ಚಾಗಿ ಸಂಜೆಯ ಸಮಯದಲ್ಲಿ ಈ ಲಕ್ಷಣ ಕಂಡು ಬಂದರೆ ಕಿಡ್ನಿಯ ಆರೋಗ್ಯವಾಗಿಲ್ಲ ಎಂದರ್ಥ.

ಅತಿಯಾದ ತುರಿಕೆ

ಕಾಲಿನ ಭಾಗದಲ್ಲಿ ಚರ್ಮದ ಅತಿಯಾದ ತುರಿಕೆಯೂ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸೂಚನೆಯಾಗಿರಬಹುದು.

ಮೂತ್ರಪಿಂಡ

ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ ಅದು ರಕ್ತದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಕಾರಣವಾಗುವ ಸಾಧ್ಯತೆ ಇದ್ದು ಚರ್ಮದ ತುರಿಕೆ ಉಂಟಾಗಬಹುದು.

ಕಾಲುಗಳಲ್ಲಿ ಸೆಳೆತ

ರಾತ್ರಿ ವೇಳೆ  ಹಠಾತ್ ಸ್ನಾಯು ಸೆಳೆತ, ಕಾಲುಗಳಲ್ಲಿ ಸೆಳೆತವೂ ಕಿಡ್ನಿಯ ಆರೋಗ್ಯ ಸರಿಯಿಲ್ಲ ಎಂಬುದರ ಸೂಚನೆಯಾಗಿದೆ.

ಬಣ್ಣ ಬದಲಾವಣೆ

ಮೂತ್ರಪಿಂಡದ ಸಮಸ್ಯೆ ಉಂಟಾದಾಗ ಕಾಲಿನ ಭಾಗದಲ್ಲಿ ಚರ್ಮದ ಬಣ್ಣವೂ ಬದಲಾಗುವ ಸಾಧ್ಯತೆ ಇರುತ್ತದೆ.

ಮರಗಟ್ಟುವಿಕೆ

ಸುಮ್ಮನೆ ಕುಳಿತಾಗಲೂ ಪಾದಗಳಲ್ಲಿ ಸ್ವಲ್ಪ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆಯೂ ಕಿಡ್ನಿ ಆರೋಗ್ಯ ಸರಿ ಇಲ್ಲ ಎಂಬುದರ ಸೂಚನೆಯಾಗಿದೆ.