Pic Credit: pinterest
By Preeti Bhat
11 June 2025
ಲಿವರ್ ಕ್ಯಾನ್ಸರ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇವುಗಳ ಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ.
ಯಕೃತ್ತಿನ ಕ್ಯಾನ್ಸರ್‌ನ ಆರಂಭದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಯಾವುದೇ ರೀತಿಯಲ್ಲಿ ಡಯಟ್ ಮಾಡದೆಯೇ ಒಮ್ಮೆಲೇ ತೂಕ ಕಡಿಮೆಯಾಗುವುದು ಲಿವರ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.
ಲಿವರ್ ಅಥವಾ ಯಕೃತ್ತಿನ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಇರುವವರಿಗೆ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಎಷ್ಟೇ ವಿಶ್ರಾಂತಿ ಪಡೆದರೂ ಸಹ ದಣಿವಾದ ಅನುಭವಾಗುತ್ತಿದ್ದರೆ ಅದು ಸಾಮಾನ್ಯ ಸ್ಥಿತಿಯಲ್ಲ. ಇದನ್ನು ನಿರ್ಲಕ್ಷ್ಯ ಮಾಡಬೇಡಿ.
ಸಾಮಾನ್ಯವಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹವು ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ, ಈ ರೀತಿಯಾದಾಗ ನಿಮಗೆ ದೇಹ ದಣಿದ ಅನುಭವಾಗುತ್ತದೆ.
ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ, ಅಲ್ಲದೆ ತುರಿಕೆ, ಮೂತ್ರ ಗಾಢ ಬಣ್ಣಕ್ಕೆ ತಿರುಗುವುದು ಹೀಗೆ ಕೆಲವು ಲಕ್ಷಣಗಳನ್ನು ನೀವು ಗಮನಿಸಬಹುದು.
ಆದರೆ ಈ ಲಕ್ಷಣಗಳೆಲ್ಲವೂ ಕ್ಯಾನ್ಸರ್ ಆಗಿರಬೇಕೆಂಬುದಿಲ್ಲ. ಹಾಗಂತ ಈ ರೀತಿ ಲಕ್ಷಣಗಳನ್ನು ನೀವು ಅಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ.