Pic Credit: pinterest
By Preeti Bhat
26 June 2025
ನಿದ್ರೆ ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ.
ನಿದ್ರೆ ಸರಿಯಾಗಿ ಬರದಿದ್ದರೆ ಅಲಕ್ಷ್ಯ ಮಾಡಬೇಡಿ. ಇದು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು.
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಇರುವವರು ಗೊರಕೆ ಹೊಡೆಯುತ್ತಾರೆ, ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಮಾತ್ರವಲ್ಲ ತಲೆನೋವು ಆಯಾಸ ಕಂಡುಬರುತ್ತದೆ.
ಇದನ್ನು ತಡೆಯಲು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ನಮ್ಮ ಅನಾರೋಗ್ಯಕರ ಅಭ್ಯಾಸಗಳಿಂದ ಈ ರೀತಿಯ ಸಮಸ್ಯೆ ಕಂಡುಬರುತ್ತದೆ.
ಜೊತೆಗೆ ಬೆಳಗ್ಗಿನ ಸಮಯದಲ್ಲಿ ನಿದ್ದೆ ಮಾಡುವುದನ್ನು ಕಡಿಮೆ ಮಾಡಿ. ಪ್ರತಿನಿತ್ಯ ವ್ಯಾಯಾಮ ಮಾಡಿ.
ಕುಳಿತು ಕೆಲಸ ಮಾಡುವವರು ಪ್ರತಿನಿತ್ಯ ಯಾವುದಾದರೂ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಧ್ಯಾನ ಮಾಡಿ ಇದರಿಂದ ನಿದ್ರೆ ಸರಿಯಾಗಿ ಬರುತ್ತದೆ.
ಮಧುಮೇಹ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆ ತೆಗೆದುಕೊಂಡು ವ್ಯಾಯಾಮ ಮಾಡಿ.
ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕ ಮಾಡಿ. ಅಲಕ್ಷ್ಯ ಮಾಡಬೇಡಿ.