ಪುರುಷರೇ... ನಿಮ್ಮ ಈ ಅಭ್ಯಾಸಗಳು ಮಹಿಳೆಯರ ಆರೋಗ್ಯವನ್ನೇ ಹಾಳು ಮಾಡುತ್ತೆ!

Pic Credit: pinterest

By Malashree anchan

13 September  2025

ಮಹಿಳೆಯರ ಆರೋಗ್ಯ

ಪುರುಷರ ಕೆಲವು ಅಭ್ಯಾಸಗಳು ಕೂಡ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ತಿಳಿದಿದೆಯೇ?

ವೈಯಕ್ತಿಕ ನೈರ್ಮಲ್ಯ

ಪುರುಷರು ತಮ್ಮ ವೈಯಕ್ತಿಕ ನೈರ್ಮಲ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದಲ್ಲಿ, ಅದು ಅವರ ಸಂಗಾತಿಯ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

ಮೂತ್ರನಾಳದ ಸೋಂಕು

ಪುರುಷರು ಸಂಗಾತಿಯ ಹತ್ತಿರ ಬರುವಾಗ ಕೈಗಳನ್ನು ಸೋಪಿನಿಂದ ತೊಳೆಯಬೇಕು. ಇಲ್ಲವಾದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.

ಧೂಳು, ಕೊಳಕು

ಪುರುಷರ ಕೈಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಧೂಳಿನ ಅಂಶ ಕೆಲವೊಮ್ಮೆ ಮಹಿಳೆಯ ಯೋನಿಯೊಳಗೆ ಪ್ರವೇಶಿಸಿ ಸೋಂಕುಗಳಿಗೆ ಕಾರಣವಾಗಬಹುದು.

ಶಿಲೀಂಧ್ರ ಸೋಂಕು

ಪುರುಷರು ಶೌಚಾಲಯದ ಸೀಟಿನ ಮೇಲೆ ಮೂತ್ರ ವಿಸರ್ಜಿಸಿ ಅದನ್ನು ಸ್ವಚ್ಛಗೊಳಿಸದಿದ್ದರೆ, ಮಹಿಳೆಯರು ಅದನ್ನು ಬಳಸಿದಾಗ ಯುಟಿಐ, ಶಿಲೀಂಧ್ರ ಸೋಂಕುಗಳು ಬರುವ ಅಪಾಯವಿರುತ್ತದೆ.  

ಹಾರ್ಮೋನುಗಳ ಅಸಮತೋಲನ

ಹೆಂಡತಿಯ ಸುತ್ತಮುತ್ತ ಧೂಮಪಾನ ಮಾಡುವುದು ಹಾರ್ಮೋನುಗಳ ಅಸಮತೋಲನ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಬ್ಯಾಕ್ಟೀರಿಯಾ ಬೆಳವಣಿಗೆ

ಪುರುಷರು ಸ್ನಾನ ಮಾಡದಿರುವುದು ಸಂಗಾತಿಯ ಆರೋಗ್ಯಕ್ಕೆ ಅಪಾಯಕಾರಿ. ಇಬ್ಬರು ಹಾಸಿಗೆ ಹಂಚಿಕೊಂಡಾಗ ಅವರ ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೆಳವಣಿಗೆಯಾಗಬಹುದು.

ತುರಿಕೆ

ಪುರುಷರ ದೇಹದ ಕೊಳೆ ಮಹಿಳೆಯರ ಚರ್ಮಕ್ಕೆ ವರ್ಗಾವಣೆಯಾಗಿ ಇದು ಶಿಲೀಂಧ್ರಗಳ ಸೋಂಕು, ದದ್ದುಗಳು ಅಥವಾ ತುರಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.