ಸಕ್ಕರೆ ಕಾಯಿಲೆ ಇದ್ಯಾ? ನೀವು ಈ ತರಕಾರಿಗಳಿಂದ ದೂರವಿದ್ದಷ್ಟೂ ಒಳ್ಳೆಯದು!

Pic Credit: pinterest

By Preeti Bhat

16 July 2025

ಮಧುಮೇಹ

ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಎಷ್ಟೇ ಒಳ್ಳೆಯ ಆಹಾರವಾಗಿರಲಿ ತಿನ್ನುವ ಮುಂಚೆ ಯೋಚಿಸಬೇಕಾಗುತ್ತದೆ.

ತರಕಾರಿಗಳ ಸೇವನೆ

ಮಧುಮೇಹ ಇರುವವರು ಕೆಲವು ತರಕಾರಿಗಳ ಸೇವನೆಯನ್ನು ಮಿತಿಗೊಳಿಸಬೇಕು ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಸಕ್ಕರೆ ಮಟ್ಟ

ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಆಲೂಗಡ್ಡೆ ಸೇವನೆ ಮಾಡುವುದನ್ನು ಮಿತಿಗೊಳಿಸಬೇಕು.

ಜೋಳದ ಸೇವನೆ

ಜೋಳದಲ್ಲಿ ಕಾರ್ಬೋಹೈಡ್ರೇಟ್‌ಗಳಿವೆ. ಆದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಮರಗೆಣಸು ಒಳ್ಳೆಯದಲ್ಲ

ಮರಗೆಣಸು ಸೇವನೆ ಮಾಡುವುದರಿಂದ ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಮಧುಮೇಹ ಇರುವವರು ಈ ತರಕಾರಿಯನ್ನು ತಿನ್ನಬಾರದು.

ಸಿಹಿ ಆಲೂಗಡ್ಡೆ, ಗೆಣಸು

ಸಿಹಿ ಆಲೂಗಡ್ಡೆ ಅಥವಾ ಗೆಣಸು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ. ಇದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.

ಕ್ಯಾರೆಟ್ ರಸ

ಕ್ಯಾರೆಟ್ ಅತಿಯಾದ ಸೇವನೆಯು ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ವಿಶೇಷವಾಗಿ, ಕ್ಯಾರೆಟ್ ರಸದಿಂದ ದೂರವಿರುವುದು ಉತ್ತಮ.

ಹಸಿ ಈರುಳ್ಳಿ

ಹಸಿ ಈರುಳ್ಳಿ ಕೂಡ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಅವು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಹಾಗಾಗಿ ಅತಿಯಾಗಿ ಸೇವಿಸಬಾರದು