Pic Credit: pinterest
By Preeti Bhat
16 May 2025
ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ, ಜನರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ.
ಒಮ್ಮೆ ಈ ಕಾಯಿಲೆ ಬಂದರೆ ಇದರಿಂದ ಬಚಾವಾಗಿ ಹೊರಗೆ ಬರುವುದು ಅಷ್ಟು ಸುಲಭ ಎಂದು ಹೇಳಲಾಗುತ್ತದೆ.
ಆದರೆ ಈ ಒಂದು ದೇವಸ್ಥಾನದಲ್ಲಿ ದೇವರ ಪವಾಡ ಹೇಗಿದೆ ಎಂದರೆ ಬಂದಂತಹ ಸಕ್ಕರೆ ಕಾಯಿಲೆ ಕ್ಷಣದಲ್ಲಿ ಮಾಯವಾಗುತ್ತದೆ.
ತಮಿಳುನಾಡಿನ ಅಮ್ಮಪೇಟೆ ಎಂಬ ಗ್ರಾಮದಲ್ಲಿ ನೆಲೆಸಿರುವ ವೀಣಿ ಕರುಂಬೇಶ್ವರ ದೇವಸ್ಥಾನದಲ್ಲಿ ಈ ಆಶ್ಚರ್ಯಕರ ಘಟನೆ ಪ್ರತಿನಿತ್ಯವೂ ನಡೆಯುತ್ತದೆ.
ದೇವಸ್ಥಾನದಲ್ಲಿ ಸುಮಾರು 5000 ವರ್ಷಕ್ಕೂ ಹಳೆಯದಾದ ಶಿವಲಿಂಗವಿದೆ. ಇದನ್ನು ಭಗವಾನ್ ಶ್ರೀ ಕೃಷ್ಣನೇ ಪ್ರತಿಷ್ಠಾಪನೆ ಮಾಡಿದ ಎಂಬ ನಂಬಿಕೆ ಇದೆ.
ಇಲ್ಲಿ ಬರುವಂತಹ ಭಕ್ತರು ಕೇವಲ ಅರ್ಧ ಕೆಜಿ ರವೆ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ತೆಗೆದುಕೊಂಡು ಹೋಗಬೇಕು.
ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪೂಜೆ ಮಾಡಿದ ರವೆ ಮತ್ತು ಸಕ್ಕರೆಯ ಮಿಶ್ರಣವನ್ನು ದೇವಸ್ಥಾನದ ಹೊರಭಾಗದಲ್ಲಿ ಹಾಕಬೇಕು.
ಇಲ್ಲಿ ಬಂದಂತಹ ಇರುವೆಗಳು ರವೆಯನ್ನು ಬೇರೆ ಮಾಡಿ ಸಕ್ಕರೆ ತೆಗೆದುಕೊಂಡು ಹೋಗುವಾಗ ದೇಹದಲ್ಲಿರುವ ಸಕ್ಕರೆ ಅಂಶ ಕಡಿಮೆ ಆಗುತ್ತದೆ.