ಕೀಲು ನೋವಿನಿಂದ ಹಿಡಿದು ಚರ್ಮದ ಸಮಸ್ಯೆಗೂ ರಾಮಬಾಣ ಈ ಹುತ್ತದ ಮಣ್ಣು

Pic Credit: pinterest

By Sai Nanda

28 July 2025

ಹುತ್ತದ ಮಣ್ಣು

ನಾಗರ ಪಂಚಮಿ ಹಬ್ಬದಂದು ಕೆಲವೆಡೆ ಹುತ್ತಕ್ಕೆ ಹಾಲೆರೆಯುವ ಆಚರಣೆಯಿದೆ. ಆದರೆ ಈ ಹುತ್ತದ ಮಣ್ಣಿನ ಆರೋಗ್ಯ ಪ್ರಯೋಜನಗಳು ನೀವು ತಿಳಿದುಕೊಳ್ಳುವುದು ಒಳ್ಳೆಯದು.

ಔಷಧೀಯ ಗುಣ

ಪ್ರಕೃತಿಯಲ್ಲಿ ಸಿಗುವ ಈ ಹುತ್ತದ ಮಣ್ಣಿನಲ್ಲಿ ಔಷಧೀಯ ಗುಣಗಳು ಅಧಿಕವಾಗಿದ್ದು, ಈ ಕೆಲವು ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ.

ಚರ್ಮರೋಗ

 ಚರ್ಮದ ಸಮಸ್ಯೆಗೆ ಈ ಹುತ್ತದ ಮಣ್ಣಿನಲ್ಲಿದೆ ಪರಿಹಾರ. ಹುತ್ತದ ಮಣ್ಣಿಗೆ ಗೋಮೂತ್ರ ಬೆರೆಸಿ ಹಚ್ಚುವುದರಿಂದ ಚರ್ಮದ ಕಾಯಿಲೆ ಶಮನವಾಗುತ್ತದೆ.

ಕೀಲು ನೋವು

ಕೀಲು ನೋವು ಸಮಸ್ಯೆ ಇರುವವರು ಈ ಹುತ್ತದ ಮಣ್ಣಿಗೆ ಹುಣಸೆ ಹಣ್ಣಿನ ನೀರು, ಜೇನು ತುಪ್ಪ, ಕಾಳು ಮೆಣಸಿನ ಪುಡಿ ಹಾಗೂ ಅರಶಿನ ಬೆರೆಸಿ ಹಚ್ಚಿಕೊಳ್ಳುವುದು ಪರಿಣಾಮಕಾರಿಯಾಗಿದೆ.

ಡಾರ್ಕ್ ಸರ್ಕಲ್

ಹುತ್ತದ ಮಣ್ಣನ್ನು ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಗೆ ಹಚ್ಚಿಕೊಳ್ಳುವುದರಿಂದ ಇದು ಕಪ್ಪು ಕಲೆಯನ್ನು ನಿವಾರಿಸಿ ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ.

ಮೊಡವೆ ಸಮಸ್ಯೆ

ಹುತ್ತದ ಮಣ್ಣಿಗೆ ನೀರು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಯೂ ದೂರವಾಗುತ್ತದೆ.

ರಕ್ತ ಸಂಚಾರ

ಔಷಧೀಯ ಗುಣವುಳ್ಳ ಹುತ್ತದ ಮಣ್ಣನ್ನು ನೀರಿನಲ್ಲಿ ಬೆರೆಸಿ ದೇಹಕ್ಕೆ ಹಚ್ಚಿಕೊಳ್ಳುವುದರಿಂದ  ಇದು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.

ಹುತ್ತದ ಮಣ್ಣು ಮಿಶ್ರಿತ ಸ್ನಾನ

ಹುತ್ತದ ಮಣ್ಣನ್ನು ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ, ಹಾಗೂ ದೇಹದ ಆಯಾಸವು ನಿವಾರಣೆಯಾಗುತ್ತದೆ.