ನೀವು ಕೂಡ ಈ ಆಹಾರಗಳ ಸೇವನೆ ಮಾಡ್ತಿರಾ? ನರಗಳಿಗೆ ಹಾನಿ ಮಾಡುತ್ತೆ ಹುಷಾರ್

Pic Credit: pinterest

By Preeti Bhat

24 July 2025

ಜೀವನಶೈಲಿ

ನರಗಳ ಆರೋಗ್ಯವು ದೇಹದ ಒಟ್ಟಾರೆ ಆರೋಗ್ಯಕ್ಕೆ ಬಹಳ ನಿರ್ಣಾಯಕವಾಗಿದೆ. ಆದರೆ, ನಮ್ಮ ಜೀವನಶೈಲಿಯಿಂದಾಗಿ, ಹೆಚ್ಚಿನವರಲ್ಲಿ ನರ ದೌರ್ಬಲ್ಯ ಸಮಸ್ಯೆ ಕಂಡುಬರುತ್ತಿದೆ.

ಮಧುಮೇಹ

ತಂಪು ಪಾನೀಯ, ಪ್ಯಾಕ್ ಮಾಡಿದ ಆಹಾರ ನರಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಮಧುಮೇಹ, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.

ಬರ್ಗರ್

ಪಿಜ್ಜಾ, ಬರ್ಗರ್ ಮತ್ತು ಫ್ರೆಂಚ್ ಫ್ರೈಸ್‌ನಂತಹ ಜಂಕ್ ಫುಡ್‌ಗಳ ಜೊತೆಗೆ, ಫಾಸ್ಟ್ ಫುಡ್‌ಗಳು ನರಗಳಿಗೆ ಹಾನಿಕಾರಕ. ಅವು ನರ ದೌರ್ಬಲ್ಯ ಸಮಸ್ಯೆಗೆ ಕಾರಣವಾಗಬಹುದು.

ನರಗಳಿಗೆ ಹಾನಿ

ಹೆಚ್ಚಿನ ಮಟ್ಟದ ಸಕ್ಕರೆ ಬೆರೆಸಿರುವಂತಹ ಆಹಾರಗಳು ನರಗಳ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ, ನರಗಳಿಗೆ ಹಾನಿ ಮಾಡುತ್ತದೆ.

ಮದ್ಯಪಾನ

ಆಗಾಗ ಅಥವಾ ನಿರಂತರವಾಗಿ ಮದ್ಯಪಾನ ಮಾಡುವುದರಿಂದ ಮೆದುಳಿಗೆ ಹಾನಿಯಾಗುತ್ತದೆ. ಜೊತೆಗೆ ನರಗಳಿಗೆ ಹಾನಿ ಮಾಡುತ್ತದೆ.

ವಾಲ್ನಟ್‌

ಸಾಲ್ಮನ್ ಮೀನು, ಅಗಸೆ ಬೀಜಗಳು ಮತ್ತು ವಾಲ್ನಟ್‌ಗಳು ಒಮೆಗಾ- 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಇವು ನರಗಳ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.

ಬ್ರೊಕೊಲಿ

ಪಾಲಕ್ ಮತ್ತು ಬ್ರೊಕೊಲಿಯಂತಹ ತರಕಾರಿ, ಬಾದಾಮಿ ಮತ್ತು ಗೋಡಂಬಿಯಂತಹ ಒಣ ಹಣ್ಣುಗಳು ನರಗಳ ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನರಗಳ ಆರೋಗ್ಯ

ಕುಂಬಳಕಾಯಿ ಬೀಜಗಳಲ್ಲಿರುವ ಕಬ್ಬಿಣ, ಮೆಗ್ನೀಸಿಯಮ್ ಮತ್ತು ತಾಮ್ರದಂತಹ ಪೋಷಕಾಂಶಗಳು ನರಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.