Pic Credit: pinterest
By Preeti Bhat
3 September 2025
ಕೊಲೆಸ್ಟ್ರಾಲ್ ದೇಹಕ್ಕೆ ಅತ್ಯಗತ್ಯ, ಆದರೆ ಅಗತ್ಯಕ್ಕಿಂತ ಹೆಚ್ಚಾದರೆ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳಿಗೆ ಅಹ್ವಾನ ನೀಡಿದಂತಾಗಬಹುದು.
ಹಾಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹ ನೀಡುವಂತಹ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಇದು ದೀರ್ಘಾವಧಿಯಲ್ಲಿ ತೀವ್ರ ಪರಿಣಾಮ ಬೀರುತ್ತದೆ.
ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಮೊದಲ ಕಂಡು ಬರುವ ಲಕ್ಷಣವೆಂದರೆ ಕಾಲುಗಳಲ್ಲಿ ನೋವು ಕಂಡು ಬರುವುದು ಅಥವಾ ಜುಮ್ಮೆನಿಸುವಿಕೆ. ಕೆಲವರಲ್ಲಿ ಕೈ ಮತ್ತು ಪಾದ ಮರಗಟ್ಟುತ್ತದೆ.
ಕೆಲವರಲ್ಲಿ, ಪಾದ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇನ್ನು ಕೆಲವರಲ್ಲಿ ಎದೆಯಲ್ಲಿ ನೋವು ಅಥವಾ ಒತ್ತಡ ಉಂಟಾಗುವುದು ಕೂಡ ಅಧಿಕ ಕೊಲೆಸ್ಟ್ರಾಲ್‌ನ ಪ್ರಮುಖ ಲಕ್ಷಣವಾಗಿದೆ.
ಕುತ್ತಿಗೆ, ದವಡೆ ಅಥವಾ ಭುಜದಲ್ಲಿ ನೋವು ಕಂಡುಬರುವುದು ಕೂಡ ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತವಾಗಿರಬಹುದು. ಆದರೆ ಇದನ್ನು ನಿರ್ಲಕ್ಷಿಸುವವರೇ ಹೆಚ್ಚಾಗಿರುತ್ತಾರೆ.
ತಲೆ ಭಾರ ಅಥವಾ ತಲೆತಿರುಗಿದಂತಹ ಭಾವನೆ ಕೊಲೆಸ್ಟ್ರಾಲ್ ಹೆಚ್ಚಳವನ್ನು ಸೂಚಿಸುತ್ತದೆ. ಅದರಲ್ಲಿಯೂ ಮೆಟ್ಟಿಲು ಹತ್ತುವಾಗ ಬೇಗನೆ ದಣಿವಾಗುವುದನ್ನು ನಿರ್ಲಕ್ಷಿಸಬಾರದು.
ಸಾಮಾನ್ಯವಾಗಿ ಕಣ್ಣುಗಳ ಸುತ್ತ ಹಳದಿಯಾಗುವುದು ಅಥವಾ ಅಲ್ಲಲ್ಲಿ ಹಳದಿ ಬಣ್ಣದಲ್ಲಿ ಉಂಗುರಗಳ ರಚನೆಯಾಗುವುದು ಕೂಡ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣಗಳಾಗಿರಬಹುದು.
ನೀವು ಕೂಡ ದೇಹದಲ್ಲಿ ಇಂತಹ ಬದಲಾವಣೆಗಳನ್ನು ಗಮನಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಮಯೋಚಿತ ರೋಗನಿರ್ಣಯ ಈ ಸ್ಥಿತಿ ತೀವ್ರವಾಗುವುದನ್ನು ತಡೆಯಬಹುದು.