ಮಾವಿನ ಹಣ್ಣಿನ ಮಿಲ್ಕ್ ಶೇಕ್ ಈ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ
Tv9 Kannada Logo

ಮಾವಿನ ಹಣ್ಣಿನ ಮಿಲ್ಕ್ ಶೇಕ್ ಈ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ

Pic Credit: gettyimages

By Preeti Bhatt

18 April 2025

ಮಾವಿನಹಣ್ಣು

ಮಾವಿನಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮಾರುಕಟ್ಟೆಯಲ್ಲಿ ಕಂಡಾಗ ಖರೀದಿ ಮಾಡದೆಯೇ ಮನೆಗೆ ಬರಲು ಮನಸ್ಸು ಒಪ್ಪುವುದಿಲ್ಲ.

 ಮಾವಿನ ಮಿಲ್ಕ್ ಶೇಕ್

ಈ ಹಣ್ಣಿನಿಂದ ಸಾಕಷ್ಟು ಬಗೆಯ, ರುಚಿಕರವಾದ ಖಾದ್ಯಗಳನ್ನು ಮತ್ತು ಪಾನೀಯಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅತ್ಯಂತ ಪ್ರಸಿದ್ಧ.

ಬೇಸಿಗೆಯಲ್ಲಿ ದೇಹಕ್ಕೆ ಒಳ್ಳೆಯದು

ಮಾಗಿದ ಮಾವಿನಹಣ್ಣಿನ ಜೊತೆಗೆ ಹಾಲನ್ನು ಬೆರೆಸಿ ಮಾಡಿದಂತಹ ಮಾವಿನ ಹಣ್ಣಿನ ಮಿಲ್ಕ್ ಶೇಕ್  ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ರೀತಿಯ  ಪ್ರಯೋಜನಗಳನ್ನು ನೀಡುತ್ತದೆ.

ಯಾರು ಸೇವನೆ ಮಾಡಬಾರದು

ಆದರೆ ಈ ಹಣ್ಣು ಎಲ್ಲರಿಗೂ ಒಳ್ಳೆಯದಲ್ಲ. ಹಾಗಾದರೆ ಯಾರು ಇವುಗಳನ್ನು ಸೇವನೆ ಮಾಡಬಾರದು ತಿಳಿದುಕೊಳ್ಳಿ.

ತಜ್ಞರ ಸಲಹೆ

ಸಾಮಾನ್ಯವಾಗಿ ಮಾವಿನ ಹಣ್ಣಿನ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಅನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.

ಮಧುಮೇಹಿಗಳು

ಮಧುಮೇಹಿಗಳು ಇದರಿಂದ ದೂರವಿರಬೇಕು. ಇದರಲ್ಲಿ ಸಕ್ಕರೆ ಅಧಿಕವಾಗಿರುತ್ತದೆ.

ತೂಕ ಇಳಿಸಿಕೊಳ್ಳಲು

ತೂಕ ಇಳಿಸಿಕೊಳ್ಳಲು ಬಯಸುವವರು ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣಿನಿಂದ ಮಾಡಿದ ಜ್ಯೂಸ್ ಗಳನ್ನು ಕುಡಿಯಬಾರದು.

ಪಿತ್ತಜನಕಾಂಗ ಸಂಬಂಧಿಸಿದ ಸಮಸ್ಯೆ

ಗ್ಯಾಸ್, ಆಮ್ಲೀಯತೆ ಅಥವಾ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಸಹ ವೈದ್ಯರ ಸಲಹೆ ಪಡೆದ ಬಳಿಕವೇ ಮಾವಿನ ಹಣ್ಣಿನ ಶೇಕ್ ಗಳನ್ನು ಕುಡಿಯಬೇಕು.

ಸಕ್ಕರೆ ಬೆರೆಸಿ ಮಾವಿನ ಶೇಕ್

ದಿನಕ್ಕೊಮ್ಮೆ ಒಂದು ಸಣ್ಣ ಲೋಟದಲ್ಲಿ ಸೀಮಿತ ಪ್ರಮಾಣದ ಸಕ್ಕರೆ ಬೆರೆಸಿ ಮಾವಿನ ಶೇಕ್ ಕುಡಿಯಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ.