Pic Credit: pinterest
By Preeti Bhat
29 May 2025
ಹವಾಮಾನ ಬದಲಾವಣೆಯಾದಾಗ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಆದರೆ ನಾವು ನಮ್ಮ ಮುಂಜಾಗೃತೆಯಲ್ಲಿ ಇರಬೇಕಾಗುತ್ತದೆ.
ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಕೆಲವು ಸಲಹೆಗಳನ್ನು ಅನುಸರಿಸಬೇಕು. ಆಗ ಮಾತ್ರ ಮಕ್ಕಳನ್ನು ಕಾಯಿಲೆಗಳಿಂದ ದೂರವಿಡಲು ಸಾಧ್ಯ.
ಪ್ರತಿನಿತ್ಯ ಮಕ್ಕಳಿಗೆ ಆರೋಗ್ಯಕರ ಆಹಾರಗಳ ಸೇವನೆ ಮಾಡಿಸಿ. ಯಾವುದೇ ಕಾರಣಕ್ಕೂ ಹೊರಗಡೆ ಸಿಗುವಂತಹ ಆಹಾರಗಳನ್ನು ಸೇವಿಸಲು ಕೊಡಬೇಡಿ.
ವಿಟಮಿನ್ ಸಿ ಸಮೃದ್ಧವಾಗಿರುವಂತಹ ಆಹಾರವನ್ನು ಮಕ್ಕಳಿಗೆ ನೀಡಿ. ಹಾಲು, ಹಣ್ಣು, ತರಕಾರಿಗಳ ಸೇವನೆಯನ್ನು ಹೆಚ್ಚು ಮಾಡಬೇಕು.
ಹಸಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿಸಿ. ಅಂದರೆ ಬಿಸಿ ಮಾಡದಿರುವಂತಹ ಆಹಾರಗಳ ಸೇವನೆ ಕಡಿಮೆ ಮಾಡಬೇಕು.
ಪ್ರತಿನಿತ್ಯವೂ ಬಿಸಿ ಬಿಸಿಯಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ತಣ್ಣನೆಯ ಆಹಾರ ಈ ಸಮಯದಲ್ಲಿ ಒಳ್ಳೆಯದಲ್ಲ.
ಮಕ್ಕಳಿಗೆ ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೇಳಬೇಕು. ಇದರಿಂದ ಸೋಂಕು ಹರಡುವುದನ್ನು ಸಾಧ್ಯವಾದಷ್ಟು ತಡೆಯಬಹುದು.
ಪ್ರತಿನಿತ್ಯ ಒಂದು ಬಾರಿಯಾದರೂ ಲಿಂಬು ಶರಬತ್ತನ್ನು ಮಾಡಿ ಮಕ್ಕಳಿಗೆ ನೀಡಬೇಕು. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.