Pic Credit: pinterest
By Malashree anchan
19 August 2025
ಮಾಲಿನ್ಯಯುಕ್ತವಾಗಿರುವಂತಹ ಗಾಳಿಯ ನಿರಂತರ ಸೇವನೆಯಿಂದಲೂ ನಮ್ಮ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ.
ನಿರಂತರವಾಗಿ ಧೂಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಅಂಗಾಂಶದಲ್ಲಿ ಧೂಳು ಮತ್ತು ಕಣಗಳನ್ನು ಸಂಗ್ರಹಿಸಬಹುದು, ಇದು ಶ್ವಾಸಕೋಶವನ್ನು ಹಾನಿಗೊಳಿಸಬಹುದು.
ವಿಷಕಾರಿ ಅನಿಲಗಳು, ಕ್ಲೋರಿನ್, ಡೀಸೆಲ್ ಹೊಗೆ ಮತ್ತು ಬೆಂಜೀನ್ ಅನಿಲಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಸೇರಿದಂತೆ ಶ್ವಾಸಕೋಶದ ಕಾಯಿಲೆಗಳು ಉಂಟಾಗಬಹುದು.
ಕಳಪೆ ಗುಣಮಟ್ಟದ ಆಹಾರ ಸೇವನೆ, ಅನಾರೋಗ್ಯಕರ ಜೀವನಶೈಲಿ, ವ್ಯಾಯಾಮದ ಕೊರತೆಯಿಂದಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಧೂಮಪಾನ ಮಾತ್ರವಲ್ಲ ಕ್ಷಯ ಮತ್ತು ಆಸ್ತಮಾದಂತಹ ದೀರ್ಘಕಾಲದ ಕಾಯಿಲೆಗಳು ಶ್ವಾಸಕೋಶದ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ.
ಕೆಲವರಿಗೆ ಅನುವಂಶಿಕವಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದು ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್‌ಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ.
ಹೆಚ್ಚು ಸೋಡಿಯಂ ಅಂಶವಿರುವ ಆಹಾರದ ಸೇವನೆಯೂ ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚು ಉಪ್ಪಿನಾಂಶವಿರುವ ಆಹಾರ ಸೇವಿಸಬೇಡಿ.
ಧೂಮಪಾನ ಮಾಡದಿದ್ದರೂ, ಸುತ್ತಮುತ್ತಲಿನ ಯಾರಾದರೂ ಧೂಮಪಾನ ಮಾಡುತ್ತಿದ್ದರೆ, ಆ ಹೊಗೆ ನಿಮ್ಮ ದೇಹ ಸೇರಿದರೂ ಇದರಿಂದ ನಿಮ್ಮ ಶ್ವಾಸಕೋಶ ಹಾನಿಗೊಳಗಾಗುತ್ತದೆ.