Pic Credit: pinterest
By Preeti Bhat
5 August 2025
ಪ್ರಸ್ತುತ ಸಮಯದಲ್ಲಿ, ಅನೇಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿದ್ರಾಹೀನತೆಯೂ ಒಂದು. ಇದಕ್ಕೆ ಆಹಾರ ಪದ್ಧತಿಯೂ ಕಾರಣವಾಗಬಹುದು.
ಕಣ್ಣತುಂಬಾ ಒಳ್ಳೆಯ ನಿದ್ರೆ ಮಾಡಬೇಕು ಅಂದ್ರೆ ಮಲಗುವ ಮೊದಲು ಕೆಲವು ಆಹಾರಗಳಿಂದ ದೂರವಿರಿ ಎಂದು ವೈದ್ಯರು ಹೇಳುತ್ತಾರೆ.
ಕೊಬ್ಬು ಮತ್ತು ಪ್ರೋಟೀನ್‌ಗಳು ಮಾಂಸಾಹಾರದಲ್ಲಿ ಹೇರಳವಾಗಿರುತ್ತದೆ. ಇದು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಯಾವುದೇ ಸಮಯವಾಗಿರಲಿ ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಊಟದ ನಂತರ ಕಾಫಿ ಕುಡಿಯುವ ಅಭ್ಯಾಸ ನಿದ್ರಾಹೀನತೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಸಂಜೆ ನಂತರ ಕಾಫಿ ಕುಡಿಯುವುದು ಒಳ್ಳೆಯದಲ್ಲ.
ಕಾಫಿಯಂತೆಯೇ, ಚಹಾ ಎಲೆಗಳಲ್ಲಿಯೂ ಕೆಫೀನ್ ಅಂಶವಿರುತ್ತದೆ. ಹಾಗಾಗಿ ಮಲಗುವ ಮುನ್ನ ಚಹಾ ಸೇವಿಸುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರಬಹುದು.
ಜಂಕ್ ಫುಡ್ ನಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಇರುತ್ತದೆ. ಇಂತಹ ಆಹಾರಗಳು ಬೇಗನೆ ಜೀರ್ಣವಾಗುವುದಿಲ್ಲ.
ಹಾಗಾಗಿ ರಾತ್ರಿ ಸಮಯದಲ್ಲಿ ಈ ರೀತಿಯ ಆಹಾರಗಳನ್ನು ಸೇವನೆ ಮಾಡುವುದರಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ.