ಬೀದಿ ಬದಿ ಸಿಗುವ ಈ ಆಹಾರ, ನಮ್ಮ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಒಳ್ಳೆಯದು!

Pic Credit: pinterest

By Preeti Bhat

09 July 2025

ಬಜ್ಜಿ ಪಕೋಡ

ಕೆಲವರಿಗೆ ಬೀದಿ ಬದಿಯ ಆಹಾರ ಸೇವನೆ ಮಾಡುವುದೆಂದರೆ ಬಹಳ ಇಷ್ಟ. ಆದರೆ ಪಾನಿ ಪುರಿ, ಬಜ್ಜಿ ಪಕೋಡದಂತಹ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.

ಬೀದಿ ಬದಿಯ ಆಹಾರ

ಆದರೆ ಎಲ್ಲಾ ಬೀದಿ ಬದಿಯ ಆಹಾರಗಳು ಕೆಟ್ಟದ್ದಲ್ಲ. ಅದರಲ್ಲಿಯೂ ಆರೋಗ್ಯ ಪ್ರಯೋಜನಗಳಿರುತ್ತದೆ. ಇದು ಕೇಳುವುದಕ್ಕೆ ಬಹಳ ಆಶ್ಚರ್ಯವಾಗಬಹುದು!

ಆರೋಗ್ಯಕರ ಆಯ್ಕೆ

ಬೀದಿ ಬದಿ ಸಿಗುವ ಆಹಾರದಲ್ಲಿ ಕೆಲವು ಆರೋಗ್ಯಕರ ಆಯ್ಕೆಗಳಿರುತ್ತವೆ. ಹೆಚ್ಚು ಎಣ್ಣೆಯುಕ್ತವಲ್ಲದ, ಮಸಾಲೆಗಳನ್ನು ಒಳಗೊಂಡಿರದ ತಿಂಡಿಗಳಿವೆ.

ಭೇಲ್ ಪುರಿ

ಭೇಲ್ ಪುರಿಗೆ ಎಣ್ಣೆ ಬಳಸುವ ಅಗತ್ಯವಿಲ್ಲ, ಜೊತೆಗೆ ರುಚಿಯಾಗಿ ಮಾಡಬಹುದು. ಅಲ್ಲದೆ ಇದರಲ್ಲಿ ಬಳಕೆಯಾಗುವ ಪದಾರ್ಥಗಳು ಬಹಳ ಬೇಗನೆ ಜೀರ್ಣವಾಗುತ್ತವೆ.

ಕಡಲೆಕಾಯಿ ಚಾಟ್

ಕಡಲೆಕಾಯಿ ಚಾಟ್ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಯಾವುದೇ ತೊಂದರೆಯಿಲ್ಲದೆ ತಿನ್ನಬಹುದು.

ಚನಾ ಚಾಟ್

ಒಂದು ಪ್ಲೇಟ್ ಚನಾ ಚಾಟ್ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ ಮಾತ್ರವಲ್ಲ, ರುಚಿ ಮತ್ತು ಆರೋಗ್ಯ ಎರಡನ್ನೂ ನೀಡುತ್ತದೆ.

ನಿಂಬೆ ರಸ

ಜೋಳದ ಗಜ್ಜುಗೆಗಳನ್ನು ಸುಟ್ಟು ಮಾರಾಟ ಮಾಡಲಾಗುತ್ತದೆ. ಇದರ ಮೇಲೆ ಸ್ವಲ್ಪ ನಿಂಬೆ ರಸ ಮತ್ತು ಉಪ್ಪನ್ನು ಬೆರೆಸಿ ಬೇಯಿಸಿದರೆ, ರುಚಿ ತುಂಬಾ ಚೆನ್ನಾಗಿರುತ್ತದೆ.

ಬೇಯಿಸಿದ ಮೊಟ್ಟೆ

ಎಣ್ಣೆಯುಕ್ತ ಆಹಾರದ ಬದಲು ಇಡ್ಲಿ ಮತ್ತು ಬೇಯಿಸಿದ ಮೊಟ್ಟೆಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ಇದಲ್ಲದೆ, ಅವುಗಳಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ.