Pic credit - pinterest

Author: Preethi Bhat Gunavante

1 April 2025

ಸನ್ ಬರ್ನ್ ಆಗಿದೆಯೋ, ಇಲ್ಲವೋ? ಈ ರೀತಿ ತಿಳಿದುಕೊಳ್ಳಿ

ಬೇಸಿಗೆಯಲ್ಲಿ ಚರ್ಮವನ್ನು ಯುವಿ ವಿಕಿರಣಕ್ಕೆ ದೀರ್ಘಕಾಲದವರೆಗೆ ನೇರವಾಗಿ ಒಡ್ಡುವುದರಿಂದ ಸನ್ ಬರ್ನ್ ಆಗಬಹುದು.

ಸನ್ ಬರ್ನ್ ಆದಾಗ ತಕ್ಷಣವೇ ಗೊತ್ತಾಗುತ್ತದೆ. ಆದರೆ ಇನ್ನು ಕೆಲವು ಲಕ್ಷಣಗಳು ಬಿಸಿಲಿಗೆ ಚರ್ಮವನ್ನು ಒಡ್ಡಿಕೊಂಡ ಮೇಲೆ ಅನುಭವಕ್ಕೆ ಬರುತ್ತದೆ.

ಸನ್ ಬರ್ನ್ ಚರ್ಮವನ್ನು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿಸುತ್ತದೆ. ಕ್ರಮೇಣ ಗುಣವಾಗುತ್ತದೆ, ಆದರೆ ಕೆಲವರಲ್ಲಿ ಇದು  ದೀರ್ಘಕಾಲದವರೆಗೆ ಇರುತ್ತದೆ.

ಸೂರ್ಯನ ಬಿಸಿಲಿಗೆ ಒಡ್ಡಿಕೊಂಡು ಹಲವಾರು ದಿನಗಳ ನಂತರ, ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನಿರ್ಲಕ್ಷ್ಯ ಮಾಡಬಾರದು.

ಸನ್ ಬರ್ನ್ ತೀವ್ರವಾಗಿದ್ದರೆ, ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಜೊತೆಗೆ ವಾಕರಿಕೆಗೆ ಕಾರಣವಾಗಬಹುದು.

ತಲೆನೋವು, ಆಯಾಸ, ಕಣ್ಣುಗಳಲ್ಲಿ ನೋವು ಕಂಡುಬರುವುದು ಕೂಡ ಸನ್ ಬರ್ನ್ ಲಕ್ಷಣಗಳಾಗಿವೆ.

ಸೂರ್ಯನ ನೇರಳಾತೀತ ಕಿರಣಗಳು ಕೆಲವರಲ್ಲಿ ಸುಕ್ಕುಗಳು, ಕಪ್ಪು ಕಲೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು.

ತೀವ್ರ ಬಿಸಿಲಿಗೆ ಮೈ ಒಡ್ಡಬೇಡಿ. ನೀವು ಎಲ್ಲಿಗೆ ಹೋಗುವುದಾದರೂ ಬಿಸಿಲಿರುವಾಗ ಸನ್ ಬರ್ನ್ ಜಾಗವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಿ.

ಚರ್ಮ ಊದಿಕೊಂಡು ಬಳಿಕ ಚರ್ಮದ ಸಿಪ್ಪೆ ಸುಲಿಯಲು ಅಥವಾ ತುರಿಕೆ ಪ್ರಾರಂಭವಾದರೆ ವೈದ್ಯರನ್ನು ಸಂಪರ್ಕಿಸಿ.