14 June 2025

Pic credit - Pintrest

Author: Preethi Bhat

ಜಡೆ ಹೆಣೆದುಕೊಳ್ಳುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತೆ ನೋಡಿ

ಸಾಮಾನ್ಯವಾಗಿ ಕೂದಲು ಬಿಟ್ಟುಕೊಂಡಿರುವ ಹುಡುಗಿಯರಿಗಿಂತ ಲಕ್ಷಣವಾಗಿ ಜಡೆ ಹೆಣೆದುಕೊಂಡಿರುವವರು ಬೇಗ ಗಮನ ಸೆಳೆಯುತ್ತಾರೆ.

ಕೂದಲು

Pic credit - Pintrest

ಕೆಲವರು ಕೂದಲನ್ನು ಜಡೆ ಹೆಣೆದುಕೊಳ್ಳುವುದು ಅಲಂಕಾರಕ್ಕಾಗಿ ಮಾತ್ರ ಎಂದು ಭಾವಿಸಿ, ಶುಭ ಸಮಾರಂಭಗಳಲ್ಲಿ ಮಾತ್ರ ಹೂವು ಮೂಡಿದು ಜಡೆ ಹೆಣೆದುಕೊಳ್ಳುತ್ತಾರೆ.

ಜಡೆ

Pic credit - Pintrest

ಪ್ರತಿನಿತ್ಯವೂ ಕೂದಲು ಬಿಟ್ಟುಕೊಂಡಿರುವುದಕ್ಕಿಂತ ಜಡೆ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತೆ.

ಅಲಂಕಾರ

Pic credit - Pintrest

ಪ್ರತಿನಿತ್ಯ ಜಡೆ ಹಾಕಿಕೊಳ್ಳುವುದರಿಂದ ನಿಮ್ಮ ಕೂದಲಿನ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಂಡು ನಿಮ್ಮ ಕೂದಲನ್ನು ರಕ್ಷಿಸುತ್ತದೆ.

ತೇವಾಂಶ

Pic credit - Pintrest

ನೆತ್ತಿಯ ಮೇಲಿನ ಚರ್ಮ ಒಣಗದಂತೆ ನೋಡಿಕೊಳ್ಳಲು ಜಡೆ ಹಾಕಿಕೊಳ್ಳುವುದು ಬಹಳ ಒಳ್ಳೆಯದು. ಇದು ತುರಿಕೆ ಮತ್ತು ತಲೆಹೊಟ್ಟಿನ ಸಮಸ್ಯೆ ಕಡಿಮೆ ಮಾಡುತ್ತೆ.

ತುರಿಕೆ

Pic credit - Pintrest

ಮಾಲಿನ್ಯ, ಸೂರ್ಯನ ಬೆಳಕು ಹೀಗೆ ನಾನಾ ಕಾರಣಗಳಿಂದ ಕೂದಲು ಉದುರುವುದನ್ನು ತಡೆಯಲು ಜಡೆ ಹಣೆದುಕೊಳ್ಳುವುದು ಬಹಳ ಒಳ್ಳೆಯದು. 

ಮಾಲಿನ್ಯ

Pic credit - Pintrest

ಬೇರೆ ಬೇರೆ ರೀತಿಯ ಹೇರ್ ಸ್ಟೈಲ್ ಮಾಡುವುದು ಕೂಡ  ಕೂದಲಿನ ತುದಿಗಳಿಗೆ ಹಾನಿಯಾಗುವುದಕ್ಕೆ ಪ್ರಮುಖ ಕಾರಣವಾಗಬಹುದು.

ಹೇರ್ ಸ್ಟೈಲ್

Pic credit - Pintrest

ಪ್ರತಿದಿನ ಜಡೆ ಹಾಕುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಆದರೆ ಜಡೆಯನ್ನು ಬಿಗಿಯಾಗಿ ಹಾಕಬಾರದು. ಆದಷ್ಟು ಸಡಿಲವಾಗಿ ಬಿಡುವುದು ಒಳ್ಳೆಯದು.

ಬಿಗಿಯಾಗಿ

Pic credit - Pintrest