ಸಕ್ಕರೆ ಕಾಯಿಲೆಯಿಂದ ನಿಮ್ಮನ್ನು ಕಾಪಾಡುತ್ತದೆ ಈ ಬಿಂಬಳ ಕಾಯಿ

Pic Credit: pinterest

By Preeti Bhat

27 May 2025

ಬಿಂಬಳಕಾಯಿ

ಬಿಂಬಲ ಅಥವಾ ಬಿಂಬಳ ಕಾಯಿ ಬಗ್ಗೆ ನೀವು ಕೇಳಿರಬಹುದು. ಕರಾವಳಿ ಜಿಲ್ಲೆಗಳಲ್ಲಿ ಮನೆಯ ಸುತ್ತ ಮುತ್ತ ತೋಟಗಳಲ್ಲಿ ಇದನ್ನು ಬೆಳೆಯುತ್ತಾರೆ.

ರುಚಿಯಲ್ಲಿ ಹುಳಿ

ರುಚಿಯಲ್ಲಿ ಹುಳಿಯಾಗಿದ್ದರೂ ಇದು ಒಂದು ರೀತಿಯ ಬಹುಪಯೋಗಿ. ಅಡುಗೆ, ಔಷಧಿ ಹೀಗೆ ಇದನ್ನು ಅನೇಕ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ.

ಬಿಂಬಲ ಗಿಡ

ಬಹುತೇಕ ವರ್ಷವೀಡಿ ಕಾಯಿ ಬಿಡುವ ಬಿಂಬಲ ಗಿಡದಲ್ಲಿ ಗೊಂಚಲು ಗೊಂಚಲಾಗಿ ಬಿಂಬಲಕಾಯಿಗಳು ಕಾಣಿಸಿಕೊಳ್ಳುತ್ತವೆ.

ಸೋಂಕು ನಿವಾರಕ

ಇದರ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸೋಂಕು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ.

ರಕ್ತದೊತ್ತಡ

ಬಿಂಬಳ ಕಾಯಿಯ ಸೇವನೆ ರಕ್ತದೊತ್ತಡ ಇರುವವರಿಗೆ ಬಹಳ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಪ್ರತಿನಿತ್ಯ ಸೇವನೆ ಮಾಡಬಹುದು.

ಬಿಪಿ ನಿಯಂತ್ರಣ

ಬಿಂಬಲ ಕಾಯಿ ಬಿಪಿ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವ ಗುಣವನ್ನು ಹೊಂದಿದೆ.

ಮೂಳೆಗಳ ಆರೋಗ್ಯ

ಕ್ಯಾಲ್ಸಿಯಂ ಸಮೃದ್ಧವಾಗಿದ್ದು ನಮ್ಮ ಮೂಳೆಗಳ ಆರೋಗ್ಯಕ್ಕೂ ಬಹಳ ಒಳ್ಳೆಯದು.

ಕಾಂತಿಯುತ

ಇದು ಚರ್ಮದ ಆರೋಗ್ಯಕ್ಕೂ ಕೂಡ ಒಳ್ಳೆಯದು, ಇದರ ಸೇವನೆಯಿಂದ ಚರ್ಮ ಮೃದುವಾಗುವುದು ಮಾತ್ರವಲ್ಲ ಕಾಂತಿಯುತವಾಗುತ್ತದೆ.