Pic Credit: pinterest
By Preeti Bhat
12 July 2025
ನೀವು ಗಮನಿಸಿರಬಹುದು ಕೆಲವರ ದೇಹದಿಂದ ತೀವ್ರವಾದ ವಾಸನೆ ಕಂಡುಬರುತ್ತದೆ. ಇನ್ನು ಕೆಲವರಲ್ಲಿ ಸ್ನಾನ ಮಾಡಿ ಬಂದ ನಂತರವೂ ವಾಸನೆ ಹೋಗುವುದಿಲ್ಲ.
ಸ್ನಾನ ಮಾಡಿ ಬಂದ ನಂತರವೂ ವಾಸನೆ ಇರುತ್ತದೆ. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು? ದೇಹದಿಂದ ವಾಸನೆ ಬರಲು ಹಲವಾರು ಕಾರಣಗಳಿವೆ.
ವಾಸ್ತವವದಲ್ಲಿ, ಬೆವರು ಮಾತ್ರ ಅಂತಹ ಕೆಟ್ಟ ವಾಸನೆಯನ್ನು ಉಂಟುಮಾಡುವುದಿಲ್ಲ. ಬ್ಯಾಕ್ಟೀರಿಯಾಗಳು ಅದರೊಂದಿಗೆ ಸೇರಿಕೊಂಡಾಗ ಈ ರೀತಿಯಾಗುತ್ತದೆ.
ಕಂಕುಳಲ್ಲಿ, ಬೆರಳುಗಳ ಮಧ್ಯೆ ಬ್ಯಾಕ್ಟೀರಿಯಾಗಳಿರುತ್ತವೆ. ಹಾಗಾಗಿ ಈ ಜಾಗಗಳನ್ನು ತೊಳೆದು ಡಿಯೋಡರೆಂಟ್‌ಗಳನ್ನು ಅಥವಾ ವೆಟ್ ವೈಪ್‌ಗಳನ್ನು ಬಳಸಿ.
ಸ್ನಾನ ಮಾಡಿ ಬಂದ ನಂತರ ಬರುವ ವಾಸನೆಯಿಂದ ಮುಕ್ತಿ ಪಡೆಯಲು ಆಂಟಿಬ್ಯಾಕ್ಟೀರಿಯಲ್ ಕ್ಲೆನ್ಸರ್‌ಗಳನ್ನು ಬಳಸುವುದು ಸೂಕ್ತ.
ಒಂದೇ ಟವಲ್ ಅಥವಾ ಬಟ್ಟೆಗಳನ್ನು ಪದೇ ಪದೇ ಬಳಸುವುದರಿಂದ ದೇಹದಿಂದ ಬರುವ ವಾಸನೆ ಹೆಚ್ಚಾಗುತ್ತದೆ.
ಕೆಲವು ವ್ಯಕ್ತಿಗಳಲ್ಲಿ ಕಂಡುಬರುವಂತಹ ಹಾರ್ಮೋನ್ ಸಮಸ್ಯೆಗಳು ಸಹ ಅತಿಯಾದ ವಾಸನೆಯನ್ನು ಉಂಟುಮಾಡಬಹುದು.
ಬೆಳ್ಳುಳ್ಳಿ, ಈರುಳ್ಳಿ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಬೆವರುವಿಕೆಗೆ ಕಾರಣವಾಗಿ ದೇಹದಿಂದ ಕೆಟ್ಟ ವಾಸನೆ ಬರುವುದಕ್ಕೆ ಕಾರಣವಾಗುತ್ತದೆ.