Pic Credit: gettyimages
By Preeti Bhat
02 May 2025
ನಾವು ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎಂಬುದು ನಮ್ಮ ದೇಹದ ಮೇಲೆ ಮಾತ್ರವಲ್ಲದೆ ನಮ್ಮ ಮೆದುಳಿನ ಮೇಲೂ ನೇರ ಪರಿಣಾಮ ಬೀರುತ್ತದೆ.
ಜನರು ಹೆಚ್ಚಾಗಿ ಫಾಸ್ಟ್ ಫುಡ್, ಜಂಕ್ ಫುಡ್ ಜೊತೆಗೆ ಸಂಗ್ರಹಿಸಿಟ್ಟ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ.
ಈ ರೀತಿಯ ಆಹಾರಗಳ ಸೇವನೆ ಮೆದುಳಿನ ಶಕ್ತಿಯನ್ನು ನಿಧಾನಗೊಳಿಸುತ್ತವೆ. ಜೊತೆಗೆ ನಿಮ್ಮ ಜ್ಞಾಪಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಹಾಗಾಗಿ ದೇಹಕ್ಕೆ ಅಪಾಯಕಾರಿಯಾಗಿರುವ ಆಹಾರ ಮತ್ತು ಪಾನೀಯಗಳಿಂದ ದೂರವಿರುವುದು ಬಹಳ ಮುಖ್ಯವಾಗುತ್ತದೆ.
ಸಿಹಿ ತಿಂಡಿ ಅಥವಾ ಸಕ್ಕರೆ ಸೇರಿಸಿದ ಆಹಾರಗಳ ಅತಿಯಾದ ಸೇವನೆಯು ಮೆದುಳಿನಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ.
ಬರ್ಗರ್ ಮತ್ತು ಫ್ರೆಂಚ್ ಫ್ರೈಸ್ ನಂತಹ ಕರಿದ ಆಹಾರಗಳಲ್ಲಿ ಇರುವ ಟ್ರಾನ್ಸ್ ಕೊಬ್ಬುಗಳು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಬಿಳಿ ಬ್ರೆಡ್, ಬಿಸ್ಕತ್ತು, ಪಿಜ್ಜಾ, ಪಾಸ್ತಾ ಮುಂತಾದ ಸಂಸ್ಕರಿಸಿದ ಆಹಾರಗಳು ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ.
ತಂಪು ಪಾನೀಯಗಳು ಅಥವಾ ಪ್ಯಾಕೇಜ್ ಮಾಡಿದ ಹಣ್ಣಿನ ರಸಗಳು ಕೂಡ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ.