7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಈ ರೀತಿ ಮಾಡಿದ್ರೆ ಏನಾಗುತ್ತೆ ನೋಡಿ

Pic Credit: pinterest

By Preeti Bhat

4 September  2025

7 ರಿಂದ 8 ಗಂಟೆ ನಿದ್ರೆ

ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಎಷ್ಟು ಮುಖ್ಯವೋ, ನಿದ್ರೆಯೂ ಅಷ್ಟೇ ಮುಖ್ಯ. ಆರೋಗ್ಯವಾಗಿರಲು 7 ರಿಂದ 8 ಗಂಟೆ ನಿದ್ರೆ ಮಾಡುವುದು ಬಹಳ ಅವಶ್ಯಕ.

ಗಂಭೀರ ಕಾಯಿಲೆ

ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದವರಿಗೆ ಕ್ಯಾನ್ಸರ್, ಪಾರ್ಶ್ವವಾಯು, ಹೃದ್ರೋಗ ಮತ್ತು ಮಧುಮೇಹ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಗಳು ಕಂಡು ಬರಬಹುದು.

ಮಲಬದ್ಧತೆಯ ಸಮಸ್ಯೆ

ನಿದ್ರೆಯ ಕೊರತೆಯು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಮಲಬದ್ಧತೆಯನ್ನು ಅನುಭವಿಸುತ್ತಾರೆ.

ಸ್ಮರಣಶಕ್ತಿ ದುರ್ಬಲ

ದೇಹಕ್ಕೆ ಅಗತ್ಯವಾದ ನಿದ್ರೆಯ ಕೊರತೆಯು ಮೆದುಳಿನ ಕೋಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕ್ರಮೇಣ, ಸ್ಮರಣಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.

ಶಕ್ತಿ, ಸಾಮರ್ಥ್ಯ ಕುಂಠಿತ

ನಿದ್ರೆಯ ಕೊರತೆಯು ದೇಹದಲ್ಲಿ ಶಕ್ತಿ, ಸಾಮರ್ಥ್ಯ ಕುಂಠಿತಗೊಳ್ಳುವುದಕ್ಕೆ ಕಾರಣವಾಗುತ್ತದೆ. ದಣಿದ ಅನುಭವವಾಗುತ್ತದೆ. ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಕ್ಷೀಣಿಸಲು ಪ್ರಾರಂಭಿಸುತ್ತದೆ.

ನಿದ್ರೆಯ ಕೊರತೆ

ನಿದ್ರೆಯ ಕೊರತೆಯು ಮಾನಸಿಕ ಆರೋಗ್ಯವನ್ನು ಕ್ಷೀಣಿಸುತ್ತದೆ. ಇದು ವ್ಯಕ್ತಿಯಲ್ಲಿ ಕಿರಿಕಿರಿ, ಕೋಪವನ್ನು ಹೆಚ್ಚಿಸುತ್ತದೆ. ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದಲ್ಲ

ನಿದ್ರೆಯ ಕೊರತೆಯು ಕಣ್ಣುಗಳ ಮೇಲೆ ಕೂಡ ನೇರ ಪರಿಣಾಮ ಬೀರುತ್ತದೆ. ದೇಹದಲ್ಲಿ ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ.

ಚರ್ಮದಲ್ಲಿ ಕಲೆಗಳು

ನಿದ್ರೆ ಕಡಿಮೆಯಾದರೆ ಚರ್ಮವು ಸೂಕ್ಷ್ಮವಾಗಿರುವ ಪ್ರದೇಶಗಳಲ್ಲಿ ಅಂದರೆ ಕಣ್ಣುಗಳ ಕೆಳಗೆ ಕಪ್ಪು ವೃತ್ತಗಳು ಅಥವಾ ಕಲೆಗಳು ಕಾಣಿಸಿಕೊಳ್ಳುತ್ತವೆ.