Pic Credit: pinterest
By Preeti Bhat
16 May 2025
ಮೊಟ್ಟೆಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇವುಗಳ ಸೇವನೆ ಮಾಡುವುದಕ್ಕೆ ಸರಿಯಾದ ಸಮಯವಿರುತ್ತದೆ.
ಬೇಸಿಗೆಯಲ್ಲಿ ಹೆಚ್ಚು ಮೊಟ್ಟೆಗಳನ್ನು ಸೇವಿಸುವುದರಿಂದ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಈ ಸಮಯದಲ್ಲಿ ದೇಹದ ಉಷ್ಣತೆ ಸ್ವಾಭಾವಿಕವಾಗಿ ಹೆಚ್ಚಾಗಿರುತ್ತದೆ. ಮೊಟ್ಟೆಗಳ ಸೇವನೆ ಹೆಚ್ಚಾದಾಗ, ಅದು ಹೊಟ್ಟೆಯಲ್ಲಿ ಶಾಖದ ಪ್ರಮಾಣವನ್ನು ಹೆಚ್ಚಿಸುತ್ತದೆ.
ಇದು ಕೆಲವರಲ್ಲಿ ಅಜೀರ್ಣ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಬಹುದು.
ಬೇಸಿಗೆಯಲ್ಲಿ ಮೊಟ್ಟೆಗಳನ್ನು ಸೇವನೆ ಮಾಡಿದರೆ ಸಾಕಷ್ಟು ಪ್ರಮಾಣದಲ್ಲಿ ನೀರು, ಮಜ್ಜಿಗೆಯನ್ನು ಕುಡಿಯಬೇಕು.
ಹೃದ್ರೋಗ ಇರುವವರು ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಮಾಡುವುದನ್ನು ಮಿತಿಗೊಳಿಸಬೇಕು.
ಅತಿಯಾಗಿ ಮೊಟ್ಟೆ ತಿಂದರೆ ಚರ್ಮದ ಮೇಲೆ ದದ್ದುಗಳು, ಕಣ್ಣುಗಳಲ್ಲಿ ನೀರು ಬರುವುದು, ವಾಂತಿ ಮತ್ತು ಹೊಟ್ಟೆ ನೋವು ಮುಂತಾದ ಲಕ್ಷಣಗಳು ಕಂಡುಬರಬಹುದು.
ಬೇಸಿಗೆಯಲ್ಲಿ, ಒಬ್ಬ ವ್ಯಕ್ತಿ ದಿನಕ್ಕೆ ಎರಡು ಮೊಟ್ಟೆಗಳಿಗಿಂತ ಹೆಚ್ಚು ಸೇವನೆ ಮಾಡಬಾರದು. ಆರೋಗ್ಯ ಸ್ಥಿತಿ ಅವಲಂಬಿಸಿ ಮೊಟ್ಟೆ ಸೇವನೆ ಮಾಡಬೇಕು.