Pic Credit: pinterest
By Preeti Bhat
01 July 2025
ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅದೆಷ್ಟೋ ಸಂಪ್ರದಾಯ ಮತ್ತು ಸಂಸ್ಕೃತಿ ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತದೆ.
ಪ್ರಾಚೀನ ಕಾಲದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ತಮ್ಮ ಕಿವಿಗಳನ್ನು ಚುಚ್ಚಿಕೊಳ್ಳುತ್ತಿದ್ದರು. ಮಾತ್ರವಲ್ಲ, ಮಹಿಳೆಯರು ಮೂಗು ಚುಚ್ಚಿಕೊಳ್ಳುತ್ತಿದ್ದರು.
ಆದರೆ ಇದು ಕೇವಲ ಸೌಂದರ್ಯ ಅಥವಾ ಸಂಪ್ರದಾಯಕ್ಕಾಗಿ ಮಾಡಿದ್ದಲ್ಲ ಎಂದರೆ ನೀವು ನಂಬುತ್ತೀರಾ? ಹೌದು. ಈ ರೀತಿ ಮೂಗು, ಕಿವಿ ಚುಚ್ಚುವುದರ ಹಿಂದೆ ಕಾರಣವಿದೆ.
ವಾಸ್ತವವಾಗಿ, ಮೂಗು ಚುಚ್ಚುವುದರಿಂದ ಮಹಿಳೆಯರಿಗೆ ಮುಟ್ಟಿನ ನೋವಿನಿಂದ ಪರಿಹಾರ ಸಿಗುತ್ತದೆ ಎಂದು ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ.
ಹೆರಿಗೆಯ ಸಮಯದಲ್ಲಿ ಮಗುವಿಗೆ ಜನ್ಮ ನೀಡುವುದು ಸಹ ತುಂಬಾ ಸುಲಭವಾಗುತ್ತದೆ ಇದು ಆ ನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಈ ಬಗ್ಗೆ ನಡೆದ ಕೆಲವು ಸಂಶೋಧನಗೆಳು ಕೂಡ ಇದಕ್ಕೆ ಪೂರಕವಾಗಿದೆ. ಮಾತ್ರವಲ್ಲ ಇದು ಮೈಗ್ರೇನ್ ನೋವಿನಿಂದ ಕೂಡ ಪರಿಹಾರ ನೀಡುತ್ತದೆ.
ಮೂಗಿನ ಎಡಭಾಗವು ಕೆಲವು ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದೆ. ಈ ಭಾಗದಲ್ಲಿ ಚುಚ್ಚುವುದರಿಂದ ಹೆರಿಗೆ ನೋವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಎಡಭಾಗದಲ್ಲಿಯೇ ಚುಚ್ಚುವುದರಿಂದ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಕೆಲವರು ಹೇಳುತ್ತಾರೆ.