Pic Credit: pinterest
By Preeti Bhat
24 July 2025
ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯಲು ಉತ್ತಮ ಆಹಾರ ಸೇವಿಸುವಷ್ಟೇ ಅನಾರೋಗ್ಯಕರ ಆಹಾರದಿಂದ ದೂರವಿರುವುದು ಮುಖ್ಯವಾಗುತ್ತದೆ.
ಬೇಕಿಂಗ್ ಮಾಡಿದ ಆಹಾರಗಳನ್ನು ಸೇವಿಸುವುದರಿಂದ ಟ್ರೈಗ್ಲಿಸರೈಡ್ ಮಟ್ಟ ಹೆಚ್ಚಾಗುತ್ತದೆ, ಇದು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಸೋಡಾದಂತಹ ಪಾನೀಯಗಳಿಂದ ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ, ರಕ್ತದೊತ್ತಡ ಹೆಚ್ಚಾಗುವುದು ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಗೋಮಾಂಸ, ಕುರಿ ಮತ್ತು ಹಂದಿಮಾಂಸದಂತಹ ಆಹಾರಗಳನ್ನು ಸೇವಿಸುವುದರಿಂದ ಹೃದಯ ಸಮಸ್ಯೆಗಳು ಮತ್ತು ಮಧುಮೇಹದಂತಹ ಸಮಸ್ಯೆಗಳು ಉಂಟಾಗಬಹುದು.
ಉಪ್ಪು ಮತ್ತು ಸಕ್ಕರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ
ನಾವು ದಿನನಿತ್ಯ ಸೇವನೆ ಮಾಡುವ ಬಿಳಿ ಅಕ್ಕಿಯಿಂದ ತಯಾರಾದ ಅನ್ನ, ಹಾಗೆಯೇ ಪಾಸ್ತಾ ಮತ್ತು ಕೆಲವು ರೀತಿಯ ತಿಂಡಿಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಈ ರೀತಿಯ ಆಹಾರಗಳಿಂದ ಹೊಟ್ಟೆಯ ಸುತ್ತ ಕೊಬ್ಬು, ಹೃದಯ ಸಮಸ್ಯೆಗಳು ಮತ್ತು ಟೈಪ್ 2 ಮಧುಮೇಹ ಹೆಚ್ಚಾಗುತ್ತದೆ. ಇವುಗಳ ಬದಲಿಗೆ, ಕಂದು ಅಕ್ಕಿ, ಓಟ್ಸ್ ಆರಿಸಿಕೊಳ್ಳಿ.
ಆರೋಗ್ಯ ಕಾಪಾಡಿಕೊಳ್ಳಲು ನೀವು ತಾಜಾ ಹಣ್ಣು, ತರಕಾರಿ, ಧಾನ್ಯ, ಕಡಿಮೆ ಕೊಬ್ಬಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬಹುದು.