ಬಾಳೆಕಾಯಿ ಸೇವಿಸಿ ಹತ್ತಾರು ಆರೋಗ್ಯ ಲಾಭ ಪಡೆಯಿರಿ

Pic Credit: pinterest

By Sai Nanda

19 September  2025

ಬಾಳೆಕಾಯಿ

ಹಸಿ ಬಾಳೆಕಾಯಿ ಇದು ಪಕ್ವವಾಗದ ಬಾಳೆಹಣ್ಣಾಗಿದ್ದು, ಇದನ್ನು ಸೇವಿಸೋದ್ರರಿಂದ ಆರೋಗ್ಯ ಲಾಭಗಳು ಹಲವಾರು ಇವೆ.

ಖಾದ್ಯಗಳು

ಬಾಳೆಕಾಯಿಯಿಂದ ಬಾಳೆ ಕಾಯಿ ಪಲ್ಯ, ಸಾಂಬಾರ್, ಬಾಳೆ ಕಾಯಿ ಚಿಪ್ಸ್, ಬಜ್ಜಿ, ಬೋಂಡ ಸೇರಿದಂತೆ ವಿವಿಧ ರುಚಿಕರ ಖಾದ್ಯಗಳನ್ನು ಮಾಡಲಾಗುತ್ತದೆ.

ಫೋಷಕಾಂಶಗಳಿಂದ ಸಮೃದ್ಧ

ವಿಟಮಿನ್ ಬಿ6, ಪೊಟ್ಯಾಶಿಯಂ ಮತ್ತು ಫೈಬರ್‌ಗಳು, ಖನಿಜಗಳು ಸೇರಿದಂತೆ ಫೋಷಕಾಂಶಗಳಿಂದ ಸಮೃದ್ಧವಾಗಿದೆ.

ತೂಕ ನಿರ್ವಹಣೆ

ಬಾಳೆಕಾಯಿಯ ನಿಯಮಿತ ಸೇವನೆ ಯೂ ಹಸಿವನ್ನು ತಡೆದು, ತೂಕ ನಿರ್ವಹಣೆಗೆ ಸಹಕಾರಿಯಾಗಿದೆ.

ದೈಹಿಕ ಆರೋಗ್ಯ

ಬಾಳೆಕಾಯಿಯಲ್ಲಿ ಪಿಷ್ಟ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿದ್ದು  ಇದು ದೈಹಿಕ ಆರೋಗ್ಯವನ್ನು ರಕ್ಷಿಸುತ್ತದೆ.

ಜೀರ್ಣಕ್ರಿಯೆ

ಬಾಳೆಕಾಯಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಸುಧಾರಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ಹೃದಯದ ಆರೋಗ್ಯ

ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ  ಹಾಗೂ ಹೃದಯವನ್ನು ಆರೋಗ್ಯಯುತವಾಗಿರಿಸುತ್ತದೆ.

ರಕ್ತ ಶುದ್ಧೀಕರಣಕ್ಕೆ ಸಹಕಾರಿ

ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುತ್ತದೆ.