Pic Credit: pinterest
By Sai Nanda
25 September 2025
ಸಾಮಾನ್ಯವಾಗಿ ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಈ ಹಣ್ಣಿನ ಸಿಪ್ಪೆಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಬಾಳೆಹಣ್ಣಿನ ಸಿಪ್ಪೆಯನ್ನು ತ್ವಚೆಯ ಆರೈಕೆಗೆ ಬಳಸಿಕೊಳ್ಳಬಹುದು. ಮುಖಕ್ಕೆ ಹಚ್ಚಿದರೆ ಚರ್ಮಕ್ಕೆ ಹೊಳಪು ಹೆಚ್ಚಾಗುತ್ತದೆ.
ಮಧುಮೇಹ ರೋಗಿಗಳಿಗೆ ಬಾಳೆಹಣ್ಣಿನ ಸಿಪ್ಪೆ ಪ್ರಯೋಜನಕಾರಿ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್ ಕೂದಲಿಗೆ ಹಚ್ಚಿಕೊಂಡ್ರೆ ಇದು ತಲೆಹೊಟ್ಟು, ಕೂದಲು ಉದುರುವಿಕೆಯನ್ನು ತಡೆದು ಕೂದಲಿನ ಆರೋಗ್ಯ ಕಾಪಾಡುತ್ತದೆ.
ಬಾಳೆಹಣ್ಣಿನ ಸಿಪ್ಪೆಯಲ್ಲಿನ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ.
ಟ್ರಿಪ್ಟೊಫಾನ್, ವಿಟಮಿನ್ ಬಿ6ಗಳು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಹಾಗೂ ಮನಸ್ಥಿತಿಯನ್ನು ಸುಧಾರಿಸುತ್ತವೆ.
ಹೃದಯರಕ್ತನಾಳದ ಆರೋಗ್ಯವನ್ನು ಬಲಪಡಿಸಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಬಾಳೆ ಹಣ್ಣಿನ ಸಿಪ್ಪೆಯ ಸೇವನೆಯೂ ತೂಕ ಇಳಿಸುವವರಿಗೆ ಪ್ರಯೋಜನಕಾರಿಯಾಗಿದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.