ಮೆದುಳು ವೇಗವಾಗಿ ಕೆಲಸ ಮಾಡಬೇಕಾ? ಇದನ್ನು ತಿನ್ನಿ
Tv9 Kannada Logo

ಮೆದುಳು ವೇಗವಾಗಿ ಕೆಲಸ ಮಾಡಬೇಕಾ? ಇದನ್ನು ತಿನ್ನಿ

Pic Credit: gettyimages

By Preeti Bhatt

22 April 2025

ಜ್ಞಾಪಕ ಶಕ್ತಿ

ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ನಾವು ಸೇವನೆ ಮಾಡುವ ಆಹಾರವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಉಪಹಾರ

ಹಾಗಾದರೆ ಬೆಳಗ್ಗೆ ಯಾವ ರೀತಿಯ ತಿಂಡಿ ಅಥವಾ ಉಪಹಾರಗಳ ಸೇವನೆ ಮಾಡಬೇಕು?

ಓಟ್ಸ್

ಓಟ್ಸ್ ನಲ್ಲಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದರ ಸೇವನೆಯಿಂದ ಮೆದುಳಿಗೆ ಸಾಕಷ್ಟು ಶಕ್ತಿ ಸಿಗುವುದಲ್ಲದೆ ಅದು ಚುರುಕಾಗುತ್ತದೆ.

ಆವಕಾಡೊ

ಆವಕಾಡೊ ತ್ವರಿತವಾಗಿ ಯೋಚಿಸಲು ಮತ್ತು ಏನನ್ನಾದರೂ ನೆನಪಿಟ್ಟುಕೊಳ್ಳಲು ಸುಲಭ ಮಾಡುವ ಆಹಾರಗಳಲ್ಲಿ ಒಂದಾಗಿದೆ.

ಒಮೆಗಾ -3

ಇದರಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವು ನಮ್ಮ ಜ್ಞಾಪಕ ಶಕ್ತಿಯನ್ನು ಬಲಪಡಿಸುತ್ತವೆ.

ಬ್ಲೂಬೆರ್ರಿ

ಬ್ಲೂಬೆರ್ರಿ ಮೆದುಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಜೊತೆಗೆ ವಯಸ್ಸಾದಂತೆ ಬರುವ ಮರೆವನ್ನು ಕೂಡ ಕಡಿಮೆ ಮಾಡುತ್ತದೆ.

ಚಿಯಾ ಬೀಜ

ಚಿಯಾ ಬೀಜಗಳಲ್ಲಿನ ಒಮೆಗಾ -3 ಆಮ್ಲಗಳು ಮತ್ತು ಫೈಬರ್ ಅಂಶ ಮೆದುಳಿಗೆ ಶಕ್ತಿಯನ್ನು ನೀಡುತ್ತದೆ ಜೊತೆಗೆ ಆರೋಗ್ಯಕರವಾಗಿರಿಸುತ್ತದೆ.

ಕುಂಬಳಕಾಯಿ ಬೀಜ

ಚಿಯಾ ಬೀಜಗಳಲ್ಲಿನ ಒಮೆಗಾ -3 ಆಮ್ಲಗಳು ಮತ್ತು ಫೈಬರ್ ಅಂಶ ಮೆದುಳಿಗೆ ಶಕ್ತಿಯನ್ನು ನೀಡುತ್ತದೆ ಜೊತೆಗೆ ಆರೋಗ್ಯಕರವಾಗಿರಿಸುತ್ತದೆ.

ಪಾಲಕ್ ಸೊಪ್ಪು 

ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಕೆ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಮೆದುಳಿನ ಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.