ಮೀನಿನ ಎಣ್ಣೆ ಸೇವನೆ ಮಾಡಿ, ಯಾಕೆ ಗೊತ್ತಾ

Pic Credit: pinterest

By Preeti Bhat

30 May 2025

ಮೀನಿನ ಎಣ್ಣೆ

ಮೀನಿನ ಎಣ್ಣೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅನಾರೋಗ್ಯದಿಂದ ದೂರವಿರಲು ಈ ಎಣ್ಣೆಯ ಸೇವನೆ ಬಹಳ ಮುಖ್ಯವಾಗಿದೆ.

ವಿಟಮಿನ್ ಡಿ

ಮೀನಿನ ಎಣ್ಣೆಯಲ್ಲಿ ಒಮೆಗಾ- 3 ಕೊಬ್ಬಿನಾಮ್ಲಗಳು ಮತ್ತು ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಡಿ ಯಂತಹ ಅನೇಕ ಪೋಷಕಾಂಶಗಳಿವೆ.

ಮಾಂಸಾಹಾರ 

ಮಾಂಸಾಹಾರ ಸೇವನೆ ಮಾಡದವರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳ ಕೊರತೆಯನ್ನು ನೀಗಿಸಲು ಮೀನಿನ ಎಣ್ಣೆಯ ಸೇವನೆ ಮಾಡಬಹುದು.

ಹೃದಯದ ಆರೋಗ್ಯ

ಇದರಲ್ಲಿ ಒಮೆಗಾ 3 ಸೇರಿದಂತೆ ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಈ ಎಣ್ಣೆ ಸೇವನೆ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ರಕ್ತ ಸಂಚಾರ

ಮೀನಿನ ಎಣ್ಣೆ ರಕ್ತದಲ್ಲಿನ ಕೊಬ್ಬು, ರಕ್ತ ಸಂಚಾರ ಸೇರಿದಂತೆ ವಿವಿಧ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

ಮಧುಮೇಹ

ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಮೀನಿನ ಎಣ್ಣೆ ತುಂಬಾ ಪ್ರಯೋಜನಕಾರಿ.

ಮೂಳೆಗಳ ಬಲ

ಮೀನಿನ ಎಣ್ಣೆಯು ಮೂಳೆಗಳನ್ನು ಬಲಪಡಿಸುತ್ತದೆ  ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಸಂಧಿವಾತ

ಮೀನಿನ ಎಣ್ಣೆಯು ನಿಯಮಿತ ಸೇವನೆಯು ಸಂಧಿವಾತದಂತಹ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ.