ಅಲಾರಾಂ ಇಟ್ಟುಕೊಳ್ಳದೆ ಬೇಗ ಎದ್ದೇಳಲು ಈ ರೀತಿ ಮಾಡಿ

Pic Credit: pinterest

By Preeti Bhat

24 May 2025

ಅಲಾರಾಂ

ಬೆಳಗ್ಗೆ ಬೇಗ ನಿದ್ದೆಯಿಂದ ಏಳಬೇಕು, ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳಬೇಕು ಎಂದು ಅಲಾರಾಂ ಇಟ್ಟುಕೊಂಡು ಮಲಗುವುದು ಬಹುತೇಕರ ಅಭ್ಯಾಸ.

ಆರೋಗ್ಯಕ್ಕೆ ಹಾನಿ

ಆದರೆ ಹೀಗೆ ಪ್ರತಿನಿತ್ಯ ಅಲಾರಾಂ ಇಟ್ಟುಕೊಂಡು ಮಲಗುವುದು ನಿಮ್ಮ ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರಬಹುದು.

ಗಾಢ ನಿದ್ದೆ

ಗಾಢ ನಿದ್ದೆಯಲ್ಲಿರುವ ವ್ಯಕ್ತಿಯನ್ನ ಅಲಾರಾಂ ಶಬ್ದ ಏಕಾಏಕಿ ಎಚ್ಚರಗೊಳಿಸುವುದರಿಂದ ಮಾನವನ ದೇಹ ವ್ಯತಿರಿಕ್ತವಾಗಿ ವರ್ತಿಸಲಿದೆ.

ಸ್ಟ್ರೆಸ್ ಹಾರ್ಮೋನ್‌

ಅಲಾರಾಂನ ಶಬ್ದಕ್ಕೆ ಏಕಾಏಕಿ ಎಚ್ಚರಗೊಳ್ಳುವಾಗ ದೇಹ ಅಡೆರೆನೈಲ್‌ನಂತಹ ಸ್ಟ್ರೆಸ್ ಹಾರ್ಮೋನ್‌ಗಳನ್ನ ರಿಲೀಸ್ ಮಾಡುತ್ತದೆ.

ಮಾರ್ನಿಂಗ್ ಹೈಪರ್‌ಟೆನ್ಶನ್

ಈ ರೀತಿಯ ಅಭ್ಯಾಸ ಹೃದಯದ ಬಡಿತ, ರಕ್ತದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಇದನ್ನು ಮಾರ್ನಿಂಗ್ ಹೈಪರ್‌ಟೆನ್ಶನ್ ಎಂದು ಕರೆಯಲಾಗುತ್ತದೆ.

ಬೇಗ ಮಲಗಿ

ಪ್ರತಿನಿತ್ಯ ಸಾಧ್ಯವಾದಷ್ಟು ಬೇಗ ಮಲಗಿ ಬೇಗ ನಿದ್ದೆಯಿಂದ ಎದ್ದೇಳಲು ಪ್ರಯತ್ನಿಸಿ. ಆಗ ಅಲಾರಾಂನ ಅವಶ್ಯಕತೆಯೇ ಬರುವುದಿಲ್ಲ.

ಸೂರ್ಯನ ಕಿರಣ

ಉತ್ತಮವಾದ ಬೆಳಕು ಬರುವ ಸ್ಥಳದಲ್ಲಿ ಮಲಗುವುದರಿಂದ ಬೆಳಗಿನ ಸೂರ್ಯನ ಕಿರಣಗಳು ನಿಮ್ಮನ್ನ ಎಚ್ಚರಗೊಳಿಸಲಿವೆ.

ಉತ್ತಮ ನಿದ್ರೆ

ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯದಲ್ಲಿ ಎದ್ದೇಳುವುದೂ ಉತ್ತಮ ನಿದ್ರೆಗೆ ನಿಮಗೆ ಸಹಕಾರಿಯಾಗಲಿದೆ.