ದೊಡ್ಡ ಪತ್ರೆ ಎಲೆಯಲ್ಲಿದೆ ಈ ಗಂಭೀರ ಕಾಯಿಲೆ ವಾಸಿ ಮಾಡುವ ಗುಣ

Pic Credit: pinterest

By Preeti Bhat

22 May 2025

ಸಾಂಬ್ರಾಣಿ ಎಲೆ

ದೊಡ್ಡ ಪತ್ರೆ, ಸಾಂಬಾರ್ ಸೊಪ್ಪು, ಸಂಬಾರ ಬಳ್ಳಿ, ಸಾಂಬ್ರಾಣಿ ಎಲೆ, ಕರ್ಪೂರವಳ್ಳಿ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ಗಿಡ ಅಮೃತಕ್ಕೆ ಸಮಾನವಾದ ಗುಣಗಳನ್ನು ಹೊಂದಿದೆ.

ಉಸಿರಾಟದ ಸಮಸ್ಯೆ

ದೊಡ್ಡ ಪತ್ರೆ ಅಥವಾ ಸಾಂಬ್ರಾಣಿ ಎಲೆಯ ರಸವು ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ.

ಜೀರ್ಣಕ್ರಿಯೆ

ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉರಿಯುವಿಕೆಯ ಸಮಸ್ಯೆಯನ್ನು ಶಮನ ಮಾಡುತ್ತದೆ.

ರಕ್ತದೊತ್ತಡ

ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಈ ಎಲೆ ಪ್ರಯೋಜನಕಾರಿಯಾಗಿದೆ.

ಜ್ವರ

ಚಿಕ್ಕ ಮಕ್ಕಳಿಗೆ ಜ್ವರ ಇದನ್ನು ಸಣ್ಣ ಬೆಂಕಿಯಲ್ಲಿಟ್ಟು ಬಾಡಿಸಿ, ಅದರ ರಸ ತೆಗೆದು ಮಕ್ಕಳಿಗೆ ಕುಡಿಯಲು ನೀಡಬೇಕು.

ನೋವು ನಿವಾರಣೆ

ಸಾಂಬ್ರಾಣಿ ಎಲೆಯ ರಸವನ್ನು ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.

ಕಾಮಾಲೆ

ಒಂದು ವಾರದ ವರೆಗೆ ಪ್ರತಿನಿತ್ಯ ತಪ್ಪದೆ ದೊಡ್ಡಪತ್ರೆ ಎಲೆಯ ರಸವನ್ನು ಸೇವನೆ ಮಾಡಿದಲ್ಲಿ ಹಳದಿ ರೋಗ, ಕಾಮಾಲೆ ನಿವಾರಣೆಯಾಗುತ್ತದೆ.

ಚರ್ಮದ ಕಾಂತಿ

ಸಾಂಬ್ರಾಣಿ ಎಲೆಯ ರಸವನ್ನು ಮೊಸರಿನಲ್ಲಿ ಬೆರೆಸಿ ಮುಖ, ಕೈ- ಕಾಲುಗಳಿಗೆ ಹಚ್ಚಿಕೊಳ್ಳವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.